ವಿಜ್ಞಾನ ಜಗತ್ತನ್ನು ತೆರೆದಿಟ್ಟ ಯುನಿಟಿ ವಿದ್ಯಾರ್ಥಿಗಳು: ಕಣ್ಮನ ಸೆಳೆದ ವಿಜ್ಞಾನ ವಸ್ತುಪ್ರದರ್ಶನ
ವಿಜ್ಞಾನ ಜಗತ್ತನ್ನು ತೆರೆದಿಟ್ಟ ಯುನಿಟಿ ವಿದ್ಯಾರ್ಥಿಗಳು: ಕಣ್ಮನ ಸೆಳೆದ ವಿಜ್ಞಾನ ವಸ್ತುಪ್ರದರ್ಶನ

ವಿಜ್ಞಾನ ಜಗತ್ತನ್ನು ತೆರೆದಿಟ್ಟ ಯುನಿಟಿ ವಿದ್ಯಾರ್ಥಿಗಳು: ಕಣ್ಮನ ಸೆಳೆದ ವಿಜ್ಞಾನ ವಸ್ತುಪ್ರದರ್ಶನ
ಕಾರವಾರ: ನಗರದ ಕೋಡಿಭಾಗದ ರಹೀಮ್ ಖಾನ್ ಯುನಿಟಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಿಷನ್ ಮಂಗಳಯಾನ ಯಶಸ್ವಿ ಪ್ರಾಯೋಗಿಕ ಪ್ರದರ್ಶನ ವಿದ್ಯಾರ್ಥಿಗಳ ಕ್ರೀಯಾಶೀಲತೆಗೆ ಸಾಕ್ಷಿಯಾಯಿತು.
ನಗರದ ಕೋಡಿಭಾಗದ ರಹೀಮ್ ಖಾನ್ ಯುನಿಟಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಮಿಷನ್ ಚಂದ್ರಯಾನ ವಿಜ್ಞಾನ ಪ್ರದರ್ಶನದಲ್ಲಿ ಇದರೊಂದಿಗೆ ವಿಜ್ಞಾನ ವಿಷಯಗಳ ಕುರಿತು ಸಾಕಷ್ಟು ಮಾದರಿಗಳನ್ನು ಸಿದ್ಧಪಡಿಸಿದ್ದ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ಲೋಕವನ್ನೇ ಸೃಷ್ಟಿ ಮಾಡಿದ್ದರು.
ಚಂದ್ರಯಾನ ಸೇರಿದಂತೆ ಕುತೂಹಲಕಾರಿ ವಿಷಯಗಳನ್ನು ಬಿಂಬಿಸುವ ವಿವಿಧ ಮಾದರಿಗಳ ಪ್ರದಶಿಸುವ ಮೂಲಕ ವಿದ್ಯಾರ್ಥಿಗಳು ಕೌಶಲ್ಯತೆ ಮೆರೆದರು.
ಈ ಪ್ರೌಢಶಾಲೆಯಲ್ಲಿ ಪ್ರಾಯೋಗಿಕವಾಗಿ ನಡೆದ ಮಿಷನ್ ಚಂದ್ರಯಾನದ ಯಶಸ್ವಿ ಉಡಾವಣೆ ಮಾದರಿ ಎಲ್ಲರ ಗಮನ ಸೆಳೆಯಿತು. ಗೆಲಕ್ಸಿ, ಮೂನ್, ಶ್ರೀ ಹರಿಕೋಟ ಸ್ಪೆಸ್ ಸ್ಟೇಷನ್, ಒರ್‌ಬಿಟರ್ ಹೀಗೆ ವಿವಿಧ ಮಾದರಿಗಳನ್ನು ಪ್ರದರ್ಶಿಸಲಾಯಿತು.
ಇದರೊಂದಿಗೆ ವಿದ್ಯಾರ್ಥಿಗಳು ತಾವೇ ತಯಾರಿಸಿದ ಸುಸ್ಥಿರ ಕೃಷಿ ಪದ್ಧತಿ, ಸ್ವಚ್ಚತೆ ಮತ್ತು ಆರೋಗ್ಯ, ತ್ಯಾಜ್ಯ ನಿರ್ವಹಣೆ, ಸಂಪನ್ಮೂಲ ನಿರ್ವಹಣೆಯ ಮಾದರಿ, ವಿಜ್ಞಾನ ತಂತ್ರಜ್ಞಾನದ ಸಹಾಯದಿಂದ ಹೇಗೆ ಅಭಿವೃದ್ಧಿ ಕಾರ್ಯ ನಡೆಯಬಹುದು ಎಂಬುದರ ಕುರಿತು ವಿದ್ಯಾರ್ಥಿಗಳು ಉತ್ತಮವಾಗಿ ವಿವರಣೆ ನೀಡಿದರು.