Uncategorized
ಸಿನಿಮೀಯ ರೀತಿಯಲ್ಲಿ ಮುಂಡಗೋಡದಲ್ಲಿ ಉದ್ಯಮಿ ಅಪಹರಣ!
ಸಿನಿಮೀಯ ರೀತಿಯಲ್ಲಿ ಮುಂಡಗೋಡದಲ್ಲಿ ಉದ್ಯಮಿ ಅಪಹರಣ!

ಸಿನಿಮೀಯ ರೀತಿಯಲ್ಲಿ ಮುಂಡಗೋಡದಲ್ಲಿ ಉದ್ಯಮಿ ಅಪಹರಣ!
ಮುಂಡಗೋಡ: ಸಿನಿಮೀಯ ರೀತಿಯಲ್ಲಿ ಉದ್ಯಮಿಯೋರ್ವರನ್ನು ಅಪಹರಣ ಮಾಡಲಾಗಿದೆ. ಮುಂಡಗೋಡ ಪಟ್ಟಣದಲ್ಲಿ ಉದ್ಯಮಿಯೊಬ್ಬರ ಅಪಹರಣ ನಡೆದಿರುವ ಬಗ್ಗೆ ವರದಿಯಾಗಿದೆ.
ಮುಂಡಗೋಡಿನ ಜಮೀರ್ ಅಹ್ಮದ್ ದರ್ಗಾವಾಲೆ ಅಪಹರಣಕ್ಕೊಳಗಾದ ಉದ್ಯಮಿ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳದಲ್ಲಿ ಜನರು ನೆರೆದು ಆಘಾತ ವ್ಯಕ್ತಪಡಿಸುತ್ತಿದ್ದಾರೆ.
ಮುಂಡಗೋಡಿನ ತಾಲೂಕು ಕ್ರೀಡಾಂಗಣದಿಂದ ಸ್ಕೂಟಿಯಲ್ಲಿ ಹೋಗುತಿದ್ದ ಜಮೀರ್ ಗೆ ಬಿಳಿ ಬಣ್ಣದ ಕಾರೊಂದು ಡಿಕ್ಕಿ ಹೊಡೆದು ಬೀಳಿಸಿ, ಕಾರಿನಲ್ಲಿದ್ದವರು ಚಾಕು ತೋರಿಸಿ ಅಪಹರಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಪಹರಿಸಿ ಕಾರಿನಲ್ಲಿ ಎಳೆದೊಯ್ದು ಹಾವೇರಿ ಮಾರ್ಗದಲ್ಲಿ ಅಪಹರಣಗಾರರು ತೆರಳಿದ್ದಾರೆನ್ನಾಲಾಗುತ್ತಿದೆ.
ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.