ಕಿಡ್ನ್ಯಾಪ್ ಆಗಿದ್ದ ಉದ್ಯಮಿ ರಕ್ಷಣೆ: ಅಪಹರಣಕಾರರು ಅಂದರ್
ಕಿಡ್ನ್ಯಾಪ್ ಆಗಿದ್ದ ಉದ್ಯಮಿ ರಕ್ಷಣೆ: ಅಪಹರಣಕಾರರು ಅಂದರ್

ಕಿಡ್ನ್ಯಾಪ್ ಆಗಿದ್ದ ಉದ್ಯಮಿ ರಕ್ಷಣೆ: ಅಪಹರಣಕಾರರು ಅಂದರ್
ಮುಂಡಗೋಡ: ದುಷ್ಕರ್ಮಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಮುಂಡಗೋಡದ ಉದ್ಯಮಿ ಜಮೀರ್ ಅಹ್ಮದ್ ದರ್ಗಾವಲೆ ಸುರಕ್ಷಿತರಾಗಿದ್ದಾರೆ. ಅವರನ್ನು ಹೊಳೆಯ ಬಳಿ ಕಾರಿನಲ್ಲಿ ಕರೆದೊಯ್ದು ಹುಬ್ಬಳ್ಳಿಯ ಗದಗ ರಸ್ತೆಯ ರಿಂಗ್ ರೋಡ್‌ನಲ್ಲಿ ಬಿಟ್ಟು ಹೋಗಿದ್ದಾರೆನ್ನಲಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಈ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸಂಜೆ ಮುಂಡಗೋಡದ ಸಂತೆ ಮಾರ್ಕೆಟ್ ರಸ್ತೆ ಮೂಲಕ ಬರುತ್ತಿದ್ದ ದರ್ಗಾವಲೆ ಅವರ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ಕೆಡವಿದ ಅಪಹರಣಕಾರರು, ನಂತರ ಅವರನ್ನು ಕಾರಿನಲ್ಲಿ ಅಪಹರಿಸಿ ಪರಾರಿಯಾಗಿದ್ದರು.
ಅಪಹರಣ ಪ್ರಕರಣವನ್ನು ನೋಡಿದರೆ, ಹಣಕ್ಕಾಗಿ ನಡೆದ ಕೃತ್ಯ ಎಂಬ ಅನುಮಾನ ಮೂಡಿದೆ. ಯುವ ಉದ್ಯಮಿಯನ್ನು ಹಣಕ್ಕಾಗಿ ಅಪಹರಿಸಿದ್ದಾರೆಯೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಅದೇ ವೇಳೆ, ಅಪಹರಣಕಾರರು ಹುಬ್ಬಳ್ಳಿಯ ಗದಗ ರಿಂಗ್ ರೋಡ್ ಬಳಿ ಬಿಟ್ಟು ಪರಾರಿಯಾಗಿದ್ದು, ಒಂದು ಸಂದೇಶವನ್ನು ಬಿಟ್ಟುಹೋದರು. ಘಟನೆ ನಡೆದ ಕ್ಷಣದಿಂದಲೇ ಮುಂಡಗೋಡದ ಪೊಲೀಸರು ತಕ್ಷಣವೇ ಐದು ತಂಡ ರಚಿಸಿ ಕಾರ್ಯಚರಣೆಗೆ ಇಳಿದಿದ್ದರು. ರಾತ್ರಿ ಸುಮಾರು 11 ಗಂಟೆಗೆ, ಹುಬ್ಬಳ್ಳಿಯ ಗದಗ ರಿಂಗ್ ರಸ್ತೆಯಲ್ಲಿಯೇ ಜಮೀರ್ ಅಹ್ಮದ್ ದರ್ಗಾವಲೆ ಅವರನ್ನು ಬಿಟ್ಟುಹೋಗಿರುವ ಮಾಹಿತಿ ದೊರೆಯಿತು. ಅಂತೆಯೇ, ಚಿಕ್ಕೋಡಿಯ ಹತ್ತಿರ ಮುಂಡಗೋಡ ಪೊಲೀಸರು ಐದು ಆರೋಪಿಗಳನ್ನು ಬಂಧಿಸಿದ್ದಾರೆ.
ಖಾಸಗಿ ಆಸ್ಪತ್ರೆಗೆ ದಾಖಲು..!
ಬಚಾವಾಗಿ ಬಂದಿರುವ ಜಮೀರ್ ಅಹ್ಮದ್ ಅವರನ್ನು ಅಪಹರಣಕಾರರು ಹಲ್ಲೆ ಮಾಡಿದ್ದ ಹಿನ್ನಲೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸರು ಅಪಹರಣ ಮಾಡಿದ ಆರೋಪಿಗಳನ್ನು ಹಿಡಿದು ನಗರಕ್ಕೆ ಕರೆತರುವ ಸಾಧ್ಯತೆ ಇದೆ.