ಬಸ್‌ನಲ್ಲಿ ಗಂಟು ಮರೆತು ಇಳಿದ ವೃದ್ಧೆ: ವಿಳಾಸ ಪತ್ತೆಹಚ್ಚಿ ವಸ್ತು ಮರಳಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ!
ಬಸ್‌ನಲ್ಲಿ ಗಂಟು ಮರೆತು ಇಳಿದ ವೃದ್ಧೆ: ವಿಳಾಸ ಪತ್ತೆಹಚ್ಚಿ ವಸ್ತು ಮರಳಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ!

*ಬಸ್‌ನಲ್ಲಿ ಗಂಟು ಮರೆತು ಇಳಿದ ವೃದ್ಧೆ: ವಿಳಾಸ ಪತ್ತೆಹಚ್ಚಿ ವಸ್ತು ಮರಳಿಸಿ ಪ್ರಾಮಾಣಿಕತೆ ಮೆರೆದ ನಿರ್ವಾಹಕ!
ಶಿರಸಿ: ಸಾಮಾನ್ಯವಾಗಿ ಬಸ್ ಚಾಲಕ ನಿರ್ವಾಹಕರ ಬಗ್ಗೆ ಮೂಗು ಮುರಿಯುವರೇ ಹೆಚ್ಚಾಗಿರುವ ಇಂದಿನ ದಿನಮಾನದಲ್ಲಿ ನಿರ್ವಾಕನೊಬ್ಬ ಎಂತಹ ಪುಣ್ಯದ ಕೆಲಸಮಾಡಿದ್ದಾನೆ ದಯವಿಟ್ಟು ಒಮ್ಮೆ ನೋಡಿ…
ಹಾವೇರಿ ತಾಲೂಕಿನ ಬಾಳಂಬೀಡ ಗ್ರಾಮದ ಅಕ್ಕಮ್ಮ ಎನ್ನುವವರು 70 ವರ್ಷದ ಕ್ಯಾನ್ಸರ್ ಕಾಯಿಲೆ ಪೀಡಿತ ವಯೋವೃದ್ಧ ಮಹಿಳೆ. ಇವರು ತನ್ನ ಚಿಕಿತ್ಸೆಗಾಗಿ ಉಡುಪಿಯ ಶ್ರೀ ಕೃಷ್ಣ ದೇವಸ್ಥಾನದ ಮುಂದೆ ಅವಲಕ್ಕಿಯನ್ನು ಮಾರಿ ಕೂಡಿಟ್ಟ 9,500 ರೂ ಹಣವನ್ನು ಖಾಲಿ ಅಕ್ಕಿ ಚೀಲದಲ್ಲಿ ತನ್ನ ದಿನ ಬಳಕೆ ಬಾಂಡೆಸಾಮಾನುಗಳ ಜೊತೆ ಗಂಟುಕಟ್ಟಿಕೊಂಡು ತನ್ನೊಂದಿಗೆ ಸಿರಸಿ ಹಾವೇರಿ ಮಾರ್ಗದ ಬಸ್ಸಿನಲ್ಲಿ ಎರಡು ದಿನದ ಹಿಂದೆ ಪ್ರಯಾಣ ಮಾಡಿದ್ದರು. ಈ ಸಂದರ್ಭದಲ್ಲಿ ಗಡಿಬಿಡಿಯಲ್ಲಿ ಮರೆತು ಚೀಲವನ್ನು ಬಸ್ಸಿನಲ್ಲಿಯೇ ಬಿಟ್ಟು ಇಳಿದಿದ್ದರು.
ಗಂಟುಕಟ್ಟಿದ ಈ ಚೀಲವನ್ನು ಗಮನಿಸಿದ ಶಿರಸಿ ಹಾವೇರಿ ಬಸ್‌ನ ಖಾಯಂ ನಿರ್ವಾಹಕರಾದ ಮಹಮ್ಮದ್ ಗೌಸ್ ನದಾಫ್ ಇದನ್ನು ಜತನದಿಂದ ಕಾಪಾಡಿ ಅದರಲ್ಲಿರುವ ಪಡಿತರ ಚೀಟಿ ಕಾರ್ಡ್ ನಲ್ಲಿನ ವಿಳಾಸದ ಆಧಾರದ ಮೇಲೆ ಮೂಲ ವಾರಸುದಾರರನ್ನು ಪತ್ತೆ ಮಾಡಿ, ಅತ್ಯಂತ ಕಷ್ಟದಲ್ಲಿದ್ದ ಮಹಿಳೆಗೆ ಮರಳಿ ಸಿಗುವಲ್ಲಿ ಅತ್ಯಂತ ಪ್ರಾಮಾಣಿಕತೆ ತೋರಿದ್ದಾರೆ.
ಕಡು ಬಡತನದಲ್ಲಿರುವ ಈ ವೃದ್ಧೆ ಹಣ ಹಾಗೂ ಸಾಮಾನು ಸರಂಜಾಮುಗಳನ್ನು ಮರಳಿ ಪಡೆದು, ಅತೀವ ಸಂತಸ ವ್ಯಕ್ತಪಡಿಸಿ ಕೇವಲ ನಿರ್ವಾಹಕನಿಗಷ್ಟೇ ಅಲ್ಲದೇ ಇಡೀ ಕೆಎಸ್ಆರ್ಟಿಸಿ ಸಂಸ್ಥೆಗೆ ಒಳ್ಳೆಯದಾಗಲೆಂದು ಆಶೀರ್ವಾದ ಮಾಡಿದ್ದಾರೆ.