
ಗಾಂಜಾ ಸೇವನೆ ದೃಢ: ಓರ್ವನ ಬಂಧ
ಶಿರಸಿ: ಗಾಂಜಾ ಮಾಧಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ನಗರ ಠಾಣೆ ಪೊಲೀಸರು ಒರ್ವನನ್ನು ಬಂಧಿಸಿರುವ ಘಟನೆ ವರದಿಯಾಗಿದೆ.
ಶಿರಸಿ ನಗರದ ಹಾಲೊಂಡ ಬಡಾವಣೆಯ ನಿವಾಸಿಯಾದ ಸೋಹನ ಲೋಕೇಶ್ ಭಂಡಾರಿ ಇತನು ಗಾಂಜಾ ಅಮಲು ಪಧಾರ್ಥ ಸೇವನೆ ಮಾಡಿದ ಸ್ಥಿತಿಯಲ್ಲಿ ಬೆಳಗ್ಗೆ ಮಾರಿಕಾಂಭಾ ನಗರದ ಹತ್ತಿರ ಸಿಕ್ಕಿ ಬಿದ್ದಿದ್ದು, ಆತನನ್ನು ವಶಕ್ಕೆ ಪಡೆದು ನಗರದ ಪಂಡೀತ ಸರಕಾರಿ ಆಸ್ಪತ್ರೆಯಲ್ಲಿ ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಡಿವಾಯೆಸ್ಪಿ ಗಣೇಶ ಕೆ.ಎಲ್ ಇವರ ಸಮರ್ಥವಾದ ಮಾರ್ಗದರ್ಶನ, ಪ್ರಭಾರ ಸಿಪಿಆಯ್ ಪಿ.ಸೀತಾರಾಮ ರವರ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ನಗರ ಠಾಣೆ ಪಿಎಸ್ಐ ನಾಗಪ್ಪ ಬಿ ಹಾಗೂ ಸಿಬ್ಬಂದಿಗಳಾದ ಹನುಮಂತ ಕಬಾಡಿ, ಮಂಜುನಾಥ ಕಾಶಿಕೋವಿ, ಪ್ರವೀಣ್ ಎನ್,ರಾಜಶೇಖರ ಅಂಗಡಿ ಪಾಲ್ಗೊಂಡಿದ್ದರು.