Uncategorized
ಬ್ರಹ್ಮಾವರದಲ್ಲಿ ಸುಲಿಗೆ ಮಾಡಿ ಅಂಕೋಲಾದಲ್ಲಿ ಸಿಕ್ಕಿಬಿದ್ದ ಆರೋಪಿಗಳು
ಬ್ರಹ್ಮಾವರದಲ್ಲಿ ಸುಲಿಗೆ ಮಾಡಿ ಅಂಕೋಲಾದಲ್ಲಿ ಸಿಕ್ಕಿಬಿದ್ದ ಆರೋಪಿಗಳು

ಅಂಕೋಲಾ: ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ ಮಾಡಿಕೊಂಡು ಸೊಲ್ಲಾಪುರದತ್ತ ಕಾರಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲಾ ಕಂಟ್ರೋಲ್ ರೂಂನಿಂದ ಬಂದ ಮಾಹಿತಿ ಆಧರಿಸಿ ಅಂಕೋಲಾ ಪಿಐ ಚಂದ್ರಶೇಖರ ಮಠಪತಿ ಮತ್ತು ಪಿಎಸ್ಐ ಉದ್ದಪ್ಪ ಧರೆಪ್ಪನವರ ಹಾಗೂ ಅಂಕೋಲಾ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಡಬ್ಲೂಎಎಸ್ಐ ಲಲಿತಾ ರಜಪೂತ್, ಸಿಪಿಸಿ 946, 967, 1361 ಹಾಗೂ ಹೆಚ್.ಆರ್.ಪಿ ಡ್ರೈವರ್ ಆದ ಸಂತೋಷ್ ರವರೊಂದಿಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 63ರ ಬಾಳೆಗುಳಿ ಕ್ರಾಸ್ ಬಳಿ ತಪಾಸಣೆಯನ್ನು ಕೈಗೊಂಡಿದ್ದರು.
ಈ ವೇಳೆ ಮಹಾರಾಷ್ಟ್ರ ನೋಂದಣಿಯ ಎಂಹೆಚ್ 06 ಎಡಬ್ಲೂ 5152 ನಂಬರಿನ ಮಾರುತಿ ಸುಜುಕಿ ಕಾರನ್ನು ತಪಾಸಣೆ ಮಾಡಿದಾಗ ಐದು ಮಂದಿ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು ಬಳಿಕ ಬೈಂದೂರು ಪಿಎಸ್ಐ ಅವರಿಗೆ ಆರೋಪಿಗಳನ್ನು ಹಸ್ತಾಂತರಿಸಿ ಪ್ರಕರಣ ಭೇದಿಸುವಲ್ಲಿ ನೆರವಾಗಿದ್ದಾರೆ.