ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು: ಡಿಸಿ ಲಕ್ಷ್ಮೀಪ್ರಿಯಾ
ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು: ಡಿಸಿ ಲಕ್ಷ್ಮೀಪ್ರಿಯಾ

ಕಾರವಾರ: ವಿದ್ಯಾರ್ಥಿಗಳು ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ವಿದ್ಯಾರ್ಥಿಗಳು ಪ್ರತಿದಿನ ಹತ್ತು ಪುಟವಾದರೂ ಪುಸ್ತಕವನ್ನು ಓದಿದರೆ ಉನ್ನತ ಸ್ಥಾನಕ್ಕೆ ಹೋಗಲು ಸಹಕಾರಿಯಾಗಲಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.
ತಾಲೂಕಿನ ಸದಾಶಿವಗಡದಲ್ಲಿನ ಅಮೃತ ವಿದ್ಯಾಲಯಮ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು ಇತ್ತಿಚ್ಚಿನ ದಿನದಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಪುಸ್ತಕ ಓದುವಿನಿಂದ ಸಾಕಷ್ಟು ಅನುಕೂಲ ಆಗಲಿದೆ. ಹಲವೆಡೆ ಲೈಬ್ರರಿಗಳಿದ್ದು ಅದನ್ನ ಬಳಸಿಕೊಳ್ಳಬೇಕು ಎಂದರು.
ಸದಾಶಿವಗಡದಲ್ಲಿ ಸರ್ಕಾರದಿಂದ ಕೆಲ ದಿನಗಳ ಹಿಂದೆ ಚೆಸ್ ಕ್ಲಬ್ ಸಹ ಪ್ರಾರಂಭಿಸಿದ್ದೇವೆ. ಹಲವು ವಿದ್ಯಾರ್ಥಿಗಳು ಉತ್ತಮವಾಗಿ ಚೆಸ್ ಆಡುತ್ತಾರೆ. ಅವರಿಗೆ ತರಬೇತಿ ಪಡೆಯಲು ಸೂಕ್ತ ಸ್ಥಳ ಇರುವುದಿಲ್ಲ. ಸದಾಶಿವಗಡದಲ್ಲಿ ಪ್ರಾರಂಭಿಸಿರುವ ಚೆಸ್ ಕ್ಲಬ್ ಶಾಲೆಗೂ ಹತ್ತಿರವಿದ್ದು ಇದನ್ನ ಸಹ ಬಳಸಿಕೊಳ್ಳಬೇಕು ಎಂದರು.
ಯಾವುದೇ ವ್ಯಕ್ತಿಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಶಾಲೆ ಪ್ರಮುಖವಾದ ಪ್ರದೇಶ ಆಗಿರುತ್ತದೆ. ಶಾಲೆಯಲ್ಲಿ ಕಲಿತ ವಿದ್ಯೆ ಜೀವನ ಪೂರ್ತಿ ಇರುತ್ತದೆ. ಅಲ್ಲದೇ ಶಾಲೆಯಲ್ಲಿ ಏನು ಕಲಿಯುತ್ತೇವೋ ಅದು ಜೀವನದ ಮುಂದಿನ ಸಾಧನೆಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಾಲಾ ದಿನವನ್ನ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ. ತಮ್ಮಲ್ಲಿರುವ ಪ್ರತಿಭೆಯನ್ನ ಮುಚ್ಚಿಟ್ಟುಕೊಳ್ಳದೇ ತೋರಿಸಿಕೊಳ್ಳಬೇಕು. ಶಿಕ್ಷಕರ ಮುಂದೆ ತಮ್ಮಲ್ಲಿನ ಪ್ರತಿಭೆ ತೋರಿಸಿದರೆ ಮುಂದೆ ಸಾಧನೆ ಮಾಡಲು ಸಹಾಯವಾಗುತ್ತದೆ. ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕರಾಗಿರಬೇಕು. ಅಲ್ಲದೇ ಸಮಯಕ್ಕೆ ಹೆಚ್ಚು ಒತ್ತನ್ನ ಕೊಟ್ಟರೇ ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಚಿತ್ತಾಕುಲಾ ಗ್ರಾಮ ಪಂಚಾಯತ ಅಧ್ಯಕ್ಷ ನಿತೀನ್ ಬಾಂದೇಕರ್ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲರಾದ ಸಂಪೂಜ್ಯ ಸ್ವಾಮಿ ಅಮಲಾಮೃತ ಪ್ರಾಣ ಅಧ್ಯಕ್ಷತೆಯನ್ನು ವಹಿಸಿದ್ದರು.