ಅಕ್ರಮ ಚಟುವಟಿಕೆಯ ತಾಣ ವಾಗುತ್ತಿರುವ ಫ್ಲೈ ಓವರ ಬ್ರಿಜ್ಡ್..!
ಅಕ್ರಮ ಚಟುವಟಿಕೆಯ ತಾಣ ವಾಗುತ್ತಿರುವ ಫ್ಲೈ ಓವರ ಬ್ರಿಜ್ಡ್..!

ಕಾರವಾರ:
ರಾಷ್ಟ್ರೀಯ ಮಹಾಮಾರ್ಗದಲ್ಲಿ ಕಾರವಾರ ನಗರದ ಲಂಡನ್ ಬ್ರಿಜ್ಡ್ ನಿಂದ ಆರ್ ಟಿ ಓ ಕಛೇರಿವರೆಗೆ ನಿರ್ಮಿಸಿರುವ ಫ್ಲೈ ಓವರ್ ಬ್ರಿಜ್ಡ್ ಮೇಲೆ ಮದ್ಯದ ಖಾಲಿ ಬಾಟಲಗಳು ಕಾಣಸಿಗುತ್ತವೆ.
ಬಾಟಲಗಳು ಗಾಳಿಯ ರಭಸಕ್ಕೆ ರಸ್ತೆ ಒಂದು ಬದಿಯಿಂದ ಇನ್ನಂದು ಬದಿಗೆ ಜಾರುತ್ತಿರುತ್ತವೆ. ಸಂಜೆ ಆಗುತ್ತಿದ್ದಂತೆ ಫ್ಲೈ ಓವರ್ ಬ್ರಿಜ್ಡ್ ನಲ್ಲಿ ಅನೇಕ ಅನೈತಿಕ ಚಟುವಟಿಗಳು ನಡೆಯುತ್ತಿವೆ. ಈ ಜಾಗ ಲವರ್ಸ್ ಪಾಯಿಂಟ್ ಕೂಡ ಆಗಿದೆ. ಹಾಗು ಮದ್ಯಪಾನ ಮಾಡುವವರಿಗೆ ಚೀಲ್ ಆಗಲು ಕೂರುವ ಹಾಟ್ ಸ್ಪಾಟ್ ಕೂಡ. ಮದ್ಯ ಅಷ್ಟೇ ಅಲ್ಲದೇ ಇಲ್ಲಿ ಗಾಂಜಾ ಸೇವನೆ, ಹಾಗು ಇನ್ನಿತರ ಅಮಲು ಪದಾರ್ಥಗಳ ಸೇವನೆ ಮಾಡಲು ಕೆಲವರು ಸಂಜೆ ಯಾಗುತ್ತಿದ್ದಂತೆ ಇಲ್ಲಿ ಒಬ್ಬಬ್ಬರಾಗಿ ಆಗಮಿಸುತ್ತಾರೆ.
ಹರೆಯದ ಯುವಕ ಯುವತಿಯರು ಕೂಡ ಇಲ್ಲಿಗೆ ಬಂದು ವಾಹನದಲ್ಲಿಯೇ ಕುಳಿತು ಸಮುದ್ರ ತೀರದಿಂದ ಬೀಸುವ ಗಾಳಿಯಲ್ಲಿ ರಮಿಸುತ್ತಾರೆ.
ರಾತ್ರಿಯಲ್ಲಿ ಕೆಲವರು ಕುಡಿತದ ಅಮಲಿನಲ್ಲಿ ರಸ್ತೆಯಿಂದ ಸಂಚರಿಸುವ ವಾಹನದ ಮೇಲೆ ನೀರಿನ ಬಾಟಲ ಎಸೆಯುವುದು, ಹಾಗು ಜೋರಾಗಿ ಕಿರುಚಿ ವಾಹನ ಸವಾರರಿಗೆ ಭಯ ಹುಟ್ಟಿಸುವಂತೆ ಮಾಡುವುದು ನಡೆಯುತ್ತಿರುವ ಬಗ್ಗೆಯೂ ಅನೇಕರು ದೂರಿದ್ದಾರೆ.
ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಿ ಮುಂದಿನ ದಿನಗಳಲ್ಲಿ ಆಗಬಹುದಾಗ ಘಟನೆ ತಡೆಯಬೇಕು ಎಂದು ಸ್ಥಳೀಯರು ಆಗ್ರಗಿಸಿದ್ದಾರೆ.