
ಮನೆಯಲ್ಲೇ ಅಕ್ರಮವಾಗಿ ಜಾನುವಾರು ವಧೆ: ಮೂವರ ಬಂಧನ
ಭಟ್ಕಳ: ಮನೆಯೊಂದರಲ್ಲಿ ಅಕ್ರಮವಾಗಿ ಜಾನುವಾರ ಕಟಾವುಮಾಡಿ ಮಾಂಸ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಭಟ್ಕಳ ಪೋಲಿಸರು ಬಂಧಿಸಿ ಬಂಧಿತರಿಂದ ಸುಮಾರು 50 ಸಾವಿರ ರೂ ಬೆಲೆಯ ಒಂದು ಕ್ವಿಂಟಲ್ ಮಾಂಸ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳು ಭಟ್ಕಳ ನಗರದ ಮುಗ್ದುಂ ಕಾಲೋನಿಯ ನ್ಯಾಷನಲ್ ಸ್ಟ್ರೀಟ್ ನಿಜಾಮುದ್ದಿನ್ ಮುಕ್ತೇಸರ್ ಮನೆಯ ಪಕ್ಕದ ಕೋಣೆಯಲ್ಲಿ ಕಾನೂನು ಬಾಹೀರವಾಗಿ ಜಾನುವಾರು ಕಟಾವು ಮಾಡಿ ಮಾಂಸ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಮುಗ್ದುಂ ಕಾಲೋನಿಯ ನಿಜಾಮುದ್ದೀನ ಮಹಮ್ಮದ್ ಇಸಾಕ ಮುಕ್ತೇಸರ್, ಮೊಹಮ್ಮದ್ ತನ್ವೀರ್ ಮೊಹರಮ್ ಇಲಿಯಾಸ್ ಹಾಗೂ ಸಿದ್ದಿಕ್ ಸ್ಟ್ರೀಟ್ ನ ಖಾಜಾ ಅಬುಲಾಸನ್ ಅಬು ಮೊಹಮ್ಮದ್ ತೊನ್ಸೆ ಬಂಧಿತ ಆರೋಪಿಗಳಾಗಿದ್ದಾರೆ.
ಸಿಪಿಆಯ್ ಸೋಮರಾಜ ರಾಠೋಡ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.