Uncategorized
ನಿಂತಿದ್ದ ಕಾರಿಗೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲು
ನಿಂತಿದ್ದ ಕಾರಿಗೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲು

ಶಿರಸಿ: ನಗರದ ವಾಣಿಜ್ಯ ಹಾಗೂ ಜನವಸತಿ ಪ್ರದೇಶವಾದ ಶ್ರದ್ಧಾನಂದ ಗಲ್ಲಿಯಲ್ಲಿ ನಿಲ್ಲಿಸಿಡಲಾಗಿದ್ದ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ನಡೆದಿದೆ.
ಯಲ್ಲಾಪುರದ ಆರ್‌ಟಿಓ ಏಜೆಂಟ್ ಮತ್ತು ಡ್ರೈವಿಂಗ್ ಸ್ಕೂಲ್‌ನ ಮಾಲಕರಾದ ಶ್ರೀನಿವಾಸ ಎಂಬುವವರ ಕಾರು ಇದಾಗಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಮುಂದಾಗಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ಹೊತ್ತಿ ಉರಿದ ಬೆಂಕಿ ಕಂಡು ಸ್ಥಳದಲ್ಲಿದ್ದ ಜನರು ಆತಂಕದಲ್ಲಿ ಚೆಲ್ಲಾಪಿಲ್ಲಿಯಾಗಿದ್ದಾರೆ. ಕೆಲವರು ಧೈರ್ಯ ಮಾಡಿ ಹತ್ತಿರದಲ್ಲಿದ್ದ ಇತರೆ ಕಾರುಗಳನ್ನು ದೂರಕ್ಕೆ ಸರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾಗಿದೆ.