
ದಾಂಡೇಲಿ: ನಗರದ ಸುಭಾಷ್ ನಗರದಲ್ಲಿ ಲಾರಿಯೊಂದರ ಬ್ರೇಕ್ ಫೇಲ್ ಆಗಿ ಟೈಲರಿಂಗ್ ಸಹಿತ ಬಟ್ಟೆ ಅಂಗಡಿಗೆ ನುಗ್ಗಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಕೆಎ: 27, ಸಿ 1808 ಸಂಖ್ಯೆಯ ಲಾರಿ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಟೈಲರಿಂಗ್ ಸಹಿತ ಬಟ್ಟೆ ಅಂಗಡಿಗೆ ನುಗ್ಗಿದೆ. ಜೀವ ಹಾನಿಯಾಗುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಆದರೆ ಟೈಲರಿಂಗ್ ಸಹಿತ ಬಟ್ಟೆ ಅಂಗಡಿಗೆ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.