Uncategorized
ಉಳವಿ ಜಾತ್ರೆ ಮಾರ್ಗದಲ್ಲಿ ವಿಶೇಷ ಗಸ್ತುಪಡೆ ನಿಯೋಜನೆ
ಉಳವಿ ಜಾತ್ರೆ ಮಾರ್ಗದಲ್ಲಿ ವಿಶೇಷ ಗಸ್ತುಪಡೆ ನಿಯೋಜನೆ

ಜೋಯಿಡಾ: ತಾಲ್ಲೂಕಿನ ಉಳವಿ ಚನ್ನಬಸವೇಶ್ವರರ ಜಾತ್ರೆ ಆರಂಭವಾಗಿದ್ದು, ಜಾತ್ರೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಚಕ್ಕಡಿ ಬಂಡಿಗಳ ಮೂಲಕ ಆಗಮಿಸುತ್ತಿದ್ದಾರೆ. ಈ ಹಿನ್ನಲೆ ಚಕ್ಕಡಿ ಸವಾರರ ಸುರಕ್ಷತೆಗಾಗಿ ಹಾಗೂ ರಸ್ತೆ ಸಂಚಾರ ನಿಯಮ ಪಾಲನೆಯ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಗಸ್ತು ಪಡೆಯನ್ನು ನಿಯೋಜಿಸಿದೆ.
ಚಕ್ಕಡಿಗಳು ಆಗಮಿಸುವ ಮಾರ್ಗವಾದ ದಾಂಡೇಲಿ ಉಪ ವಿಭಾಗದ ಮಾವಿನಕಾಯಿ ಚೆಕ್ ಪೋಸ್ಟ್‌ನಿಂದ ಹಳಿಯಾಳ, ಕರ್ಕಾ ಚೆಕ್‌ಪೋಸ್ಟ್, ದಾಂಡೇಲಿ, ಫೋಟೋಳಿ ಕ್ರಾಸ್‌ನಿಂದ ಉಳವಿವರೆಗೆ ವಿಶೇಷ ಗಸ್ತು ಪಡೆ ನಿಯೋಜಿಸಲಾಗಿದೆ.
ಈ ಮೂಲಕ ಜಾತ್ರೆಗೆ ತೆರಳುವವರಿಗೆ ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.