Social

ಸಂಭ್ರಮದಿಂದ ಸಂಪನ್ನಗೊಂಡ ‘ಮಾರ್ಕೆಪೂನಾವ್’ ಜಾತ್ರೆ; ಜೈಕಾರಗಳೊಂದಿಗೆ ಬಂಡಿ ಎಳೆದ ಭಕ್ತರು

ಸಂಭ್ರಮದಿಂದ ಸಂಪನ್ನಗೊಂಡ 'ಮಾರ್ಕೆಪೂನಾವ್' ಜಾತ್ರೆ; ಜೈಕಾರಗಳೊಂದಿಗೆ ಬಂಡಿ ಎಳೆದ ಭಕ್ತರು

 

ಕಾರವಾರ: ಕರ್ನಾಟಕ-ಗೋವಾ ಗಡಿಭಾಗವಾದ ತಾಲ್ಲೂಕಿನ ಮಾಜಾಳಿಯಲ್ಲಿ ಮಾರ್ಕೆಪೂನವ್ ಜಾತ್ರಾ ಮಹೋತ್ಸವ ಭಾನುವಾರ ಅದ್ದೂರಿಯಾಗಿ ನಡೆಯಿತು. ಜಾತ್ರೆಯಲ್ಲಿ ಹರಕೆಯ ನಿಮಿತ್ತ ಗಂಡು ಮಕ್ಕಳಿಗೆ ಹೊಟ್ಟೆಯ ಭಾಗಕ್ಕೆ ಸೂಜಿ ಚುಚ್ಚಿದಾರ ಪೋಣಿಸಿದರೆ, ಹೆಣ್ಣು ಮಕ್ಕಳು ಕುಲದೇವರಿಗೆ ದೀಪ ಹಚ್ಚುವ ಮೂಲಕ ವಿಶೇಷವಾಗಿ ಆಚರಿಸಿದರು.

ಶ್ರೀರಾಮನಾಥ ಕ್ಷೇತ್ರದ ಪರಿವಾರ ದೇವರ ಜಾತ್ರೆ ಇದಾಗಿದ್ದು, ಪ್ರತಿ ವರ್ಷ ಶುದ್ಧ ಪೂರ್ಣಿಮೆಯಂದು ಈ ಜಾತ್ರೆ ಜರುಗುತ್ತದೆ. ಹುಣ್ಣಿಮೆಗೆ ಕೊಂಕಣಿ ಭಾಷೆಯಲ್ಲಿ ಪೂನವ್ ಎನ್ನುತ್ತಾರೆ. ಹೀಗಾಗಿ ಈ ಜಾತ್ರೆಯನ್ನು ಮಾರ್ಕೆಪೂನವ್ ಎಂದು ಕರೆಯುತ್ತಾರೆ.

ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ಸಂಪ್ರದಾಯ ಹಿಂದಿನಿಂದಲೂ ರೂಢಿಯಲ್ಲಿದ್ದು, ಭಾನುವಾರ ದಾಡ್ ದೇವಸ್ಥಾನದಲ್ಲಿ 15ಕ್ಕೂ ಹೆಚ್ಚು ಗಂಡು ಮಕ್ಕಳು ಅರ್ಚಕರಿಂದ ದಾರ ಪೋಣಿಸಿಕೊಂಡು ಹರಕೆ ಅರ್ಪಿಸಿದರು. ಮಕ್ಕಳ ಪಾಲಕರೇ ತಂದಿದ್ದ ಸೂಜಿ ದಾರವನ್ನು ಅರ್ಚಕರು ಪೋಣಿಸಿ ಹೊಟ್ಟೆ ಭಾಗದಲ್ಲಿ ಸೂಜಿ ಚುಚ್ಚಿ ಒಂದು ಗಂಟು ಹಾಕುತ್ತಿದ್ದಂತೆ ಮಕ್ಕಳು ಸಂಪ್ರದಾಯದಂತೆ ಅಯ್ಯಯ್ಯೋ ಎಂದು ಕೂಗಿದರು.

ಇನ್ನು ಇದೇ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಕುಲದೇವರಿಗೆ ದೀವಜ್ (ದೀಪ) ನೀಡಿ ಹರಕೆ ಅರ್ಪಿಸಿದರು. ಈ ಗ್ರಾಮದ ಹುಡುಗಿ ಅಥವಾ ಸೊಸೆಯಾಗಿ ಗ್ರಾಮಕ್ಕೆ ಕಾಲಿರಿಸಿದವಳು ದೇವಸ್ಥಾನದ ಆವರಣದಿಂದ ದೇಪ ಬೆಳಿಗಿಕೊಂಡು ಬಂಡಿ ಹೊರಟ ಬಳಿಕ ತಲೆ ಮೇಲೆ ದೀಪವನ್ನಿರಿಸಿಕೊಂಡು ದಾಡ್ ದೇವಸ್ಥಾನದಿಂದ ಮಾರಿಕಾ ದೇವಿ (ದೇವತಿ) ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಬಂದು ಅಲ್ಲಿನ ದೇವತೆಗೆ ತಾವು ಹೊತ್ತು ತಂದ ದೀಪ ತೋರಿಸಿ ಭಕ್ತಿ ಪ್ರದರ್ಶಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!