Uncategorized
ಸ್ಪಿರಿಟ್ ಸಾಗಾಟದ ಲಾರಿ ಪಲ್ಟಿ: ಲಕ್ಷಾಂತರ ಮೌಲ್ಯದ ಸ್ಪಿರಿಟ್ ನಾಶ
ಸ್ಪಿರಿಟ್ ಸಾಗಾಟದ ಲಾರಿ ಪಲ್ಟಿ: ಲಕ್ಷಾಂತರ ಮೌಲ್ಯದ ಸ್ಪಿರಿಟ್ ನಾಶ

ಭಟ್ಕಳ: ಸ್ಪೀರಿಟ್ ತುಂಬಿದ ಲಾರಿ ಪಲ್ಟಿಯಾಗಿ ಲಕ್ಷಾಂತರ ರೂ ಮೌಲ್ಯದ ಸ್ಪೀರಿಟ್ ಹೆದ್ದಾರಿಯಲ್ಲಿ ನಾಶವಾಗಿರುವ ಘಟನೆ ಮುರುಡೇಶ್ವರ ಬಸ್ತಿ ಬಳಿ ನಡೆದಿದೆ.
ಅಬಕಾರಿ ಇಲಾಖೆಯ ಸುಪರ್ದಿಯಲ್ಲಿ ಮಹಾರಾಷ್ಟ್ರದಿಂದ ಕೇರಳಕ್ಕೆ ಸಾಗಿಸುತ್ತಿದ್ದ 9 ಸಾವಿರ ಲೀಟರ್ ದ್ರಾಕ್ಷಾ ಸ್ಪೀರಿಟ್ ತುಂಬಿದ ಲಾರಿ ಮುರುಡೇಶ್ವರದ ಬಸ್ತಿ ಬಳಿ ಪಲ್ಟಿಯಾಗಿದೆ. ಇದರಿಂದಾಗಿ ಲಾರಿಯಲ್ಲಿದ್ದ ಲಕ್ಷಾಂತ ರೂಪಾಯಿ ಮೌಲ್ಯದ ಸ್ಪೀರಿಟ್ ರಾಷ್ಟೀಯ ಹೆದ್ದಾರಿಯಲ್ಲಿ ನಾಶವಾಗಿದೆ.
ಬಸ್ತಿ ಬಳಿ ರಾಷ್ಟೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರುವುದರಿಂದಲೇ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೋಲಿಸರ ದೌಡಾಯಿಸಿ ಸ್ಪಿರಿಟ್ ಸಾಗಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.