
ಶಿರಸಿ: ತಾಲೂಕಿನ ದೊಡ್ನಳ್ಳಿ ರಸ್ತೆಯಲ್ಲಿರುವ ಎಸಳೆ ಸಮೀಪದ ಅಂಕುಶ ಲೇಔಟ್ ಬಳಿ ಬಂದಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಜೀವಜಲ ಕಾರ್ಯಪಡೆಯ ಉರಗ ಪ್ರಿಯರಾದ ಕೇಶವ ಪಾವಸ್ಕರ್ ಮತ್ತು ವಿನಯ ನಾಯ್ಕ ಇವರು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಾಯದಿಂದ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ರಾತ್ರಿ 8.15 ಗಂಟೆಗೆ ಹೆಬ್ಬಾವು ಲೇಔಟ್ ನಿಂದ ಹರಿದು ಹೋಗುತ್ತಿರುವುದು ವಾಯುವಿಹಾರ ಮಾಡುತ್ತಿದ್ದ ಪ್ರಾಂಶುಪಾಲರೊಬ್ಬರ ಕಣ್ಣಿಗೆ ಬಿದ್ದಿದ್ದರಿಂದ ಹಾವಿನಿಂದ ಸಂಭವಿಸಬಹುದಾಗಿದ್ದ ಅಪಾಯವು ತಪ್ಪಿದಂತಾಗಿದೆ.
ಬೃಹತ್ ಗಾತ್ರದ ಹೆಬ್ಬಾವು ಸುಮಾರು 12 ಅಡಿ ಉದ್ದವಿದ್ದು ಬರೊಬ್ಬರಿ ಅರ್ಧ ಕ್ವಿಂಟಲ್ ಇದೆ ಎನ್ನಲಾಗಿದೆ. ಹೆಬ್ಬಾವಿನ ರಕ್ಷಣೆ ಬಳಿಕ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.