Education

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆದ ಶಿರಸಿಯ ರಕ್ಷಾ ಹೆಗಡೆ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆದ ಶಿರಸಿಯ ರಕ್ಷಾ ಹೆಗಡೆ

 

ಶಿರಸಿ: ಕಳೆದ ಜನವರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಜೆಇಇ ಪೇಪರ್ 2 ಬಿಆರ್ಕ್ (ಬ್ಯಾಚುಲರ್ ಆರ್ಕಿಟೆಚ್ಚರ್) ಕರ್ನಾಟಕದ ಟಾಪರ್ ಆಗಿ ಶಿರಸಿಯ ರಕ್ಷಾ ದಿನೇಶ ಹೆಗಡೆ ಹೊರ ಹೊಮ್ಮಿದ್ದಾಳೆ.

ಬೆಂಗಳೂರಿನ ದೀಕ್ಷಾ ಕಾಲೇಜಿ‌ನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಈಕೆ ಜೆಇಇ ಪೇಪರ್ 2 ಬಿಆರ್ಕ ಕಷ್ಟಕರವಾದ ಪರೀಕ್ಷೆಯನ್ನು ಎದುರಿಸಿದ್ದಳು. ಇದರಲ್ಲಿ 99.986 ಶತಕಾಂಶ ಸ್ಥಾನ (ಪರ್ಸಂಟೈಲ್) ಪಡೆದು ಕರ್ನಾಟಕದ ಟಾಪರ್ ಆಗಿದ್ದು ದೇಶ ಮಟ್ಟದಲ್ಲಿ ಟಾಪ್ 7 ಒಳಗಡೆ ಬಂದಿದ್ದಾಳೆ. ದೇಶ ಮಟ್ಟದಲ್ಲಿ 63 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ದಾಖಲಿಸಿದ್ದರು. 44 ಸಾವಿರ‌ ಮಕ್ಕಳು ಪರೀಕ್ಷೆ ಎದುರಿಸಿದ್ದರು‌.

ಇನ್ನು ರಕ್ಷಾ ಹೆಗಡೆ ದಿನದಲ್ಲಿ 12-13 ತಾಸು ಓದುತ್ತಿದ್ದು, ದೀಕ್ಷಾ ಕಾಲೇಜಿನ ಸಹಕಾರ ಹಾಗೂ ದೆಹಲಿಯ ಎನ್ ಐಸಿಎಸ್ ಇನ್ಸ್ಟಿಟ್ಯೂಟನಲ್ಲಿ ತರಬೇತಿ ಮರೆಯಲು ಸಾಧ್ಯವಿಲ್ಲ. ಜೊತೆಗೆ ನಿರಂತರ ಓದು, ಶ್ರದ್ದೆ, ವ್ಯಾಯಾಮ, ಧ್ಯಾನ, ಆಹಾರದ ಬಗ್ಗೂ‌ ಲಕ್ಷ್ಯ ಈ ಸಾಧನೆಗೆ ಕಾರಣವಾಗಿದೆ ಎಂದು‌ ಪ್ರತಿಕ್ರಿಯೆ ನೀಡಿದ್ದಾಳೆ.

ಈಕೆ ಶಿರಸಿಯ‌ ಮಕ್ಕಳ ತಜ್ಞ ಡಾ. ದಿನೇಶ ಹೆಗಡೆ, ವೈದ್ಯೆ ಡಾ. ಸುಮನ್ ಹೆಗಡೆ ಅವರ ಪುತ್ರಿಯಾಗಿದ್ದಾಳೆ. ಶಿರಸಿ‌‌ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 9ನೇ ರ‌್ಯಾಂಕ್ ಪಡೆದಿದ್ದಳು.

Leave a Reply

Your email address will not be published. Required fields are marked *

Back to top button
error: Content is protected !!