Uncategorized
ಭಟ್ಕಳದಲ್ಲಿ ಶಾಲಾ ವಾಹನ ಮತ್ತು ಲಾರಿ ನಡುವೆ ಅಪಘಾತ
ಭಟ್ಕಳದಲ್ಲಿ ಶಾಲಾ ವಾಹನ ಮತ್ತು ಲಾರಿ ನಡುವೆ ಅಪಘಾತ

ಭಟ್ಕಳ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66 ಕ್ವಾಲಿಟಿ ಹೋಟೆಲ್ ಎದುರು ಶಾಲಾ ವಾಹನ ಹಾಗೂ ಲಾರಿ ನಡುವೆ ಮುಖಾಮುಖಿ ಢಿಕ್ಕಿಯಾದ ಘಟನೆ ಸೋಮವಾರ ಸಂಭವಿಸಿದೆ. ಘಟನೆಯಲ್ಲಿ ಶಾಲಾ ವಾಹನ ಚಾಲಕ ಹಾಗೂ ಮಹಿಳಾ ಕಂಡಕ್ಟರ್ ಗಾಯಗೊಂಡಿದ್ದಾರೆ.
ಭಟ್ಕಳ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಎದುರಿನಿಂದ ಬಂದ ಶಾಲಾ ವಾಹನಗಳ ನಡುವೆ ಈ ಅಪಘಾತ ಸಂಭವಿಸಿದೆ. ಅಂಜುಮನ್ ಪ್ರೈಮರಿ ಉರ್ದು ಸ್ಕೂಲ್ ಗೆ ಸೇರಿದ ಶಾಲಾ ವಾಹನವಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಶಾಲಾ ವಾಹನ ಚಾಲಕ ಹಾಗೂ ಮಹಿಳಾ ಕಂಡಕ್ಟರ್ ಅವರನ್ನ ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಬರುವ ವೇಳೆ ಈ ಘಟನೆ ನಡೆದಿದ್ದರಿಂದ ಬಾರಿ ಅನಾಹುತ ತಪ್ಪಿದೆ. ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.