Uncategorized
ಪ್ಲ್ಯಾಸ್ಟಿಕ್ ಬಳಸಿ ಇಡ್ಲಿ ತಯಾರಿಕೆ: ಅಧಿಕಾರಿಗಳ ದಾಳಿ
ಪ್ಲ್ಯಾಸ್ಟಿಕ್ ಬಳಸಿ ಇಡ್ಲಿ ತಯಾರಿಕೆ: ಅಧಿಕಾರಿಗಳ ದಾಳಿ

ಶಿರಸಿ: ಆರೋಗ್ಯಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುತ್ತಿದ್ದ ಅಂಗಡಿಗಳ ಮೇಲೆ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿರುವ ನಗರಸಭೆಯ ಅದಿಕಾರಿಗಳು ಒರ್ವ ಅಂಗಡಿಕಾರನನ್ನು ಪತ್ತೆ ಹಚ್ಚಿ ನೋಟಿಸ್ ನೀಡಿದ ಘಟನೆ ನಡೆದಿದೆ.
ಶಿರಸಿ ಶಿವಾಜಿ ಚೌಕ್ ಬಳಿ ಇರುವ ಮಲ್ಲಿಕಾ ಹೋಟೆಲ್ ಪಕ್ಕದಲ್ಲಿ ಪ್ಲಾಸ್ಟಿಕ್ ಬಳಸಿ ಇಡ್ಲಿ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಅಂಗಡಿ ಮಾಲಕನ ಮೇಲೆ ಕ್ರಮ ಜರುಗಿಸಲಾಗಿದೆ.
ನಗರಸಭೆಯ ಪೌರಾಯುಕ್ತರಾದ ಕಾಂತರಾಜ ಮಾರ್ಗದರ್ಶನ ಹಾಗು ಹಿರಿಯ ಆರೋಗ್ಯಾಧಿಕಾರಿ ಆರ್ ಎಂ ವೆರ್ಣೇಕರ್ ನೇತ್ರತ್ವದಲ್ಲಿ ದಾಳಿ ನಡೆಸಲಾಗಿತ್ತು.