Uncategorized

ಅರಣ್ಯ ಸಿಬ್ಬಂಧಿಗಳ ಅಮಾನವೀಯತೆಯ ಕೃತ್ಯ

ಅರಣ್ಯ ಸಿಬ್ಬಂಧಿಗಳ ಅಮಾನವೀಯತೆಯ ಕೃತ್ಯ

ಅರಣ್ಯ ಸಿಬ್ಬಂಧಿಗಳ ಅಮಾನವೀಯತೆಯ ಕೃತ್ಯ
ದೌರ್ಜನ್ಯಕ್ಕೆ ಖಂಡನೆ, ಕ್ರಮಕ್ಕೆ ಶಾಸಕರಿಗೆ ಒತ್ತಾಯ: ರವೀಂದ್ರ ನಾಯ್ಕ

ಶಿರಸಿ: ಅರಣ್ಯ ಸಿಬ್ಬಂದಿಗಳು ಗುರುವಾರ ಸಿದ್ದಾಪುರ ತಾಲೂಕಿನ ತಂಡಾಗುಂಡಿ ಗ್ರಾಮಪಂಚಾಯತಿ ವ್ಯಾಪ್ತಿಯ ತಾರಖಂಡ ಗ್ರಾಮದ ಅರಣ್ಯವಾಸಿಗಳ ಕುಟುಂಬದವರ ಮೇಲೆ ಅರಣ್ಯ ಸಿಬ್ಬಂದಿಗಳ ಅಮಾನವೀಯತೆಯ ದೌರ್ಜನ್ಯದ ಕೃತ್ಯವನ್ನು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತೀವ್ರವಾಗಿ ದೌರ್ಜನ್ಯ ಖಂಡಿಸಿ, ಅರಣ್ಯ ಸಿಬ್ಬಂಧಿಗಳ ಮೇಲೆ ಸೂಕ್ತ ಕ್ರಮಕ್ಕೆ ಶಾಸಕರಿಗೆ ಅವರು ಒತ್ತಾಯಿಸಿದ್ದಾರೆ.

ಇಂದು ಅರಣ್ಯ ಸಿಬ್ಬಂದಿಗಳಿಂದ ತೀವ್ರ ದೈಹಿಕ ಹಲ್ಲೆಗೆ ಒಳಗಾಗಿ ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾ ವಿನಾಯಕ ಗೌಡ ಹಾಗೂ ಅವಳ ಪತಿ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ವಿನಾಯಕ ಗೌಡ ಅವರ ಆರೋಗ್ಯ ವಿಚಾರಿಸಿದ ನಂತರ ಮೇಲಿನಂತೆ ಹೇಳಿದರು.

ಕೆರಿಯಾ ಅಜ್ಜು ಗೌಡ ಅವರು ಅನಾದಿಕಾಲದಿಂದ ಅತಿಕ್ರಮಣ ಸಾಗುವಳಿ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂಧಿಗಳು ಕಾನೂನು ವ್ಯಾಪ್ತಿಗೆ ಮೀರಿ ದೈಹಿಕ ಹಲ್ಲೆ, ಅವಾಚ್ಯ ಶಬ್ದ, ಮಾನಸಿಕ ಹಿಂಸೆ ನೀಡಿದಲ್ಲದ್ದೇ ಗಾಯಾಳು ವಿದ್ಯಾ ಪ್ರಜ್ಞೆಹೀನಳಾಗಿದ್ದಾಗಲೂ ಬಲಪ್ರಯೋಗದಿಂದ ಅರಣ್ಯ ಇಲಾಖೆಯ ವಾಹನದಲ್ಲಿ ಎತ್ತಿಹಾಕಿರುವಂತ ಗುರುತರವಾದ ಕೃತ್ಯ ಮಾಡಿರುವ ಅರಣ್ಯ ಸಿಬ್ಬಂದಿಗಳ ವರ್ತನೆ ವಿಷಾದಕರ ಎಂದು ಅವರು ಹೇಳಿದರು.

ಕ್ರಮಕ್ಕೆ ಆಗ್ರಹ: ಕಾನೂನು ಮೀರಿದ ಅರಣ್ಯ ಸಿಬ್ಬಂದಿಗಳ ಅಮಾನವೀಯ ಕೃತ್ಯಕ್ಕೆ ತಕ್ಷಣ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಕ್ರಮ ತೆಗೆದುಕೊಳ್ಳಬೇಕು. ಹಾಗೂ ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಪುನರಾವರ್ತನೆಗೊಳ್ಳದಂತೆ ಕ್ರಮ ಜರುಗಿಸಬೇಕೆಂದು ಅಧ್ಯಕ್ಷ ರವೀಂದ್ರ ನಾಯ್ಕ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!