Uncategorized

ಕ್ರಿಕೆಟ್ ಬೆಟ್ಟಿಂಗ್: ಓರ್ವನ ಬಂಧನ, ಮೂವರು ಪರಾರಿ

ಕ್ರಿಕೆಟ್ ಬೆಟ್ಟಿಂಗ್: ಓರ್ವನ ಬಂಧನ, ಮೂವರು ಪರಾರಿ

 

ಮುಂಡಗೋಡ: ಪೊಲೀಸರು ಕ್ರಿಕೆಟ್ ಪಂದ್ಯಗಳ ಮೇಲೆ ಅಕ್ರಮ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರ ಗುಂಪನ್ನು ಶನಿವಾರ ರಾತ್ರಿ ದಸ್ತಗಿರಿ ಮಾಡಿದ್ದಾರೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ನಡೆದ ಈ ಕಾರ್ಯಾಚರಣೆಯಲ್ಲಿ ಅಂಬೇಡ್ಕರ್ ಓಣಿಯ ವಾಸಿ ಮಂಜುನಾಥ ಕೊರವ (33)ನನ್ನು ಸೆರೆಹಿಡಿಯಲಾಗಿದೆ. ಆದರೆ, ಆನಂದನಗರದ ವೆಂಕಟೇಶ್ ಅರಿವಾಣ (32), ಗದಗದ ಮಂಜುನಾಥ ಆಸಂಗಿ (30) ಮತ್ತು ಸಾಂಚಿಗಳ್ಳಿಯ ಹರೀಶ ಬಾಳೆಮ್ಮನವರ್ (28) ಓಡಿಹೋಗಿದ್ದಾರೆ.

ಆರೋಪಿಗಳು ಪಂಜಾಬ್ನ ಚಂಡೀಘಢ್ನಲ್ಲಿ ನಡೆಯುತ್ತಿರುವ ಐಪಿಎಲ್ 2025ರ ರಾಜಸ್ಥಾನ-ಪಂಜಾಬ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು. ರಸ್ತೆಯಲ್ಲಿ ಹಾದುಹೋಗುವ ಜನರನ್ನು ಸಂಪರ್ಕಿಸಿ ಬೆಟ್ಟಿಂಗ್ಗೆ ಪ್ರಚಾರ ಮಾಡುತ್ತಿದ್ದ ಇವರಿಂದ 2,300 ನಗದು, ಲಾವಾ ಕಂಪನಿಯ ಮೊಬೈಲ್ ಫೋನ್, ಬೆಟ್ಟಿಂಗ್ ದಾಖಲೆಗಳ ನೋಟ್ಬುಕ್ ಮತ್ತು ಪೆನ್ನುಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ.

ಮುಂಡಗೋಡ ಪೊಲೀಸ್ ಠಾಣೆಯವರು ಈ ಬಗ್ಗೆ ಕೆಪಿ ಕಾಯ್ದೆಯ 78(1)(ಎ)(VI) ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ನಾರಾಯಣ್, ಹೆಚ್.ಎ.ಸಿ.ಪಿ ಕೃಷ್ಣಮೂರ್ತಿ, ಡಿ.ಎಸ್.ಪಿ ಗಣೇಶ್ ಕೆ.ಎಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ರಂಗನಾಥ್ ನೀಲಮ್ಮನವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಸಿಪಿಸಿ ಮಹಾಂತೇಶ್ ಮುಧೋಳ್, ಅನ್ವರ್ ಬಮ್ಮಿಗಟ್ಟಿ, ನಾಗಪ್ಪ ಎ

Related Articles

Leave a Reply

Your email address will not be published. Required fields are marked *

Back to top button
error: Content is protected !!