ಶಾಲಾ ಪಠ್ಯಕ್ರಮದಲ್ಲಿ ರಂಗಕಲೆಯ ಉಪಯೋಗ ಅತ್ಯಂತ ಮಹತ್ವದ್ದು: ಸುನೀಲ ನಾಯ್ಕ ಹಣಕೊಣ
ಶಾಲಾ ಪಠ್ಯಕ್ರಮದಲ್ಲಿ ರಂಗಕಲೆಯ ಉಪಯೋಗ ಅತ್ಯಂತ ಮಹತ್ವದ್ದು: ಸುನೀಲ ನಾಯ್ಕ ಹಣಕೊಣ

ಕಾರವಾರ: ತಾಲ್ಲೂಕಿನ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ ಕಾರವಾರದಲ್ಲಿ ನಡೆದ ಶಿಕ್ಷಣದಲ್ಲಿ ರಂಗಕಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಗಭೂಮಿ ಕಲಾವಿದರಾದ ಸುನೀಲ ನಾಯ್ಕ ಹಣಕೋಣ,
ಶಿಕ್ಷಕರು ತಮ್ಮ ಬೋಧನೆಯಲ್ಲಿ ರಂಗಕಲೆಯನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಲ್ಲಿ ಕಲಿಕೆ ಅತ್ಯಂತ ಪರಿಣಾಮಕಾರಿಯಾಗುತ್ತದೆ. ನೋಡಿ ಮಾಡಿ ಕಲಿಯುವ ಶಿಕ್ಷಣ ಶಾಶ್ವತ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹ ಕಾರ್ಯದರ್ಶಿಗಳಾದ ಶಿವಾನಂದ ಕದಂ ಮಾತನಾಡಿ ವಿಧ್ಯಾರ್ಥಿಗಳಿಗೆ ಸ್ವಯಂ ಕಲಿಕೆಗೆ ಅವಕಾಶ ನೀಡಬೇಕು. ರಂಗಕಲೆ ವಿದ್ಯಾರ್ಥಿಗಳ ಸೃಜನಾತ್ಮಕತೆಗೆ ಹೆಚ್ಚು ಒತ್ತು ಕೊಡುತ್ತದೆ ಎಂದರು.
ರಂಗಕಲೆ ವಿಷಯದ ಸಂಚಾಲಕರಾದ ಡಾ. ನವೀನ್ ದೇವರಭಾವಿ ಪ್ರಾಸ್ತಾವಿಕ ಮಾತನಾಡಿ ನಾಟಕ ನಮ್ಮ ದೈನಂದಿನ ಜೀವನದ ಓರೆಕೋರೆಗಳನ್ನು ತಿದ್ದಿ ತಿಡುವುದೇ ನಾಟಕ. ನಮ್ಮ ಬಿ.ಎಡ್ ವಿದ್ಯಾರ್ಥಿಗಳು ತಾವೇ ರಚಿಸಿ ನಿರ್ದೇಶಿಸಿರುವ ಕಿರುನಾಟಕಗಳನ್ನು ಕಳೆದ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ಮಾಡಿರುತ್ತಾರೆ ಎಂದರು.
ಪ್ರಾಚಾರ್ಯರಾದ ಡಾ. ಸುಮನ್ ಸಾವಂತ್ ಸ್ವಾಗತಿಸಿದರು. ಶಿವಾನಂದ ಮ್ಯಾಗಲಮನಿ ಪರಿಚಯಿಸಿದರು. ದೀಕ್ಷಾ ಹರಿಕಂತ್ರ ವಂದಿಸಿದರು. ನಶ್ರೀನಾಬಾನು ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳು ವಿವಿಧ ಸಾಮಾಜಿಕ. ಪರಿಸರ. ವಿಷಯದ ಮೇಲೆ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು. ಕಾಲೇಜಿನ ಭೋದಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.