Uncategorized

ಟೂರಿಸ್ಟ್ ಬೋಟ್ ಪಲ್ಟಿ ತಪ್ಪಿದ ಭಾರೀ ಅನಾಹುತ!

ಟೂರಿಸ್ಟ್ ಬೋಟ್ ಪಲ್ಟಿ ತಪ್ಪಿದ ಭಾರೀ ಅನಾಹುತ!

 

ಕಾರವಾರ: ಟೂರಿಸ್ಟ್ ಬೋಟ್ ಪಲ್ಟಿಯಾಗಿ ಭಾರೀ ಅನಾಹುತ ತಪ್ಪಿದ ಘಟನೆ ಕಾರವಾರ ನಗರದ ಠಾಗೋರ್ ಕಡಲ ತೀರದಲ್ಲಿ ನಡೆದಿದೆ.

ಕಡಲ ತೀರದಲ್ಲಿ ಪ್ರವಾಸಿ ಬೋಟ್ ನಲ್ಲಿ ಸಂಜೆ ಪ್ರವಾಸಕ್ಕೆಂದು ಬಂದು ನಾಲ್ವರು ಬೋಟ್ ನಲ್ಲಿ ತೆರಳಿದ್ದು ವಾಪಾಸ್ ಬರುವ ವೇಳೆ ಬೋಟ್ ನಿಂತಿದೆ. ಇನ್ನು ಬೋಟ್ ಚಾಲಕ ಬೋಟ್ ಸ್ಟಾರ್ಟ್ ಮಾಡಲು ಪ್ರಯತ್ನಿಸಿದ್ದು ದಡದ ಸಮೀಪ ಬಂದ ಹಿನ್ನಲೆಯಲ್ಲಿ ಇಳಿದು ಬೋಟನ್ನು ದಬ್ಬಲು ಮುಂದಾಗಿದ್ದಾನೆ.

ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ದೈತ್ಯ ಅಲೆ ಬಂದು ಬೋಟ್ ಮೇಲೆ ಮುಗ್ಗರಿಸಿದ ಪರಿಣಾಮ ಬೋಟ್ ಪಲ್ಟಿಯಾಗಿ ಬಿದ್ದಿದ್ದು ಬೋಟ್ ಕೆಳಗೆ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿಗಳು ಬೋಟನ್ನ ಮೇಲಕ್ಕೆ ಎತ್ತಿದ್ದು ಪ್ರವಾಸಿಗರಿಗೆ ಯಾವುದೇ ಗಾಯಗಳಾಗದೇ ಸುರಕ್ಷಿತವಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!