
ಶಿರಸಿ: ರಾತ್ರಿ 12 ಗಂಟೆ ಸುಮಾರಿಗೆ ಶಿರಸಿಯ ಯಲ್ಲಾಪುರ ನಾಕಾದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶಿರಸಿ ಶಹರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಆರೋಪಿತರಾದ ಶಿರಸಿಯ ಮುಸ್ಲಿಂ ಗಲ್ಲಿಯ ಇಜಾಜ ಎ.ಜೆ ಮಕ್ಬೂಲ್ ಅಹ್ಮದ್ ಷೇಖ್( 27 ) ಹಾಗೂ ರಾಜೀವ ನಗರದ ಇಮ್ರಾನ್ ಅಬ್ದುಲ್ ರಜಾಕ್ ಬೆಣ್ಣಿ(20) ಇವರನ್ನು ದಸ್ತಗಿರಿ ಮಾಡಿ ಅವರಲ್ಲಿದ್ದ 14,300/- ರೂ ಮೌಲ್ಯದ 286 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ ಹಾಗೂ ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನ ಮತ್ತು ಪಿಎಸ್ಐ ಕು.ರತ್ನಾ ಕುರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್ಐ ಪಿ.ಜಿ ಕಟ್ಟಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಹಾಂತೇಶ ಬಾರಕೇರ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಮಾರುತಿ ಮಾಳಗಿ, ಮಂಜುನಾಥ ವಾಲಿ ಕೃಷ್ಣ ರೇವಣಕರ ಪಾಲ್ಗೊಂಡಿದ್ದರು.