
ಹಳಿಯಾಳ: ಇಲ್ಲಿನ ದಾಂಡೇಲಿ ರಸ್ತೆಯಲ್ಲಿ ಮಂಗಳವಾರ ಲಾರಿಯೊಂದು ಪಲ್ಟಿ ಹೊಡೆದಿದ್ದು ಎರಡು ತಾಸು ಟ್ರಾಫಿಕ್ ಜಾಮ್ ಆದ ಘಟನೆ ನಡೆದಿದೆ.
ಸುಣ್ಣ ತುಂಬಿದ ಲಾರಿ ರಸ್ತೆಯ ಅಂಚಿಗೆ ಇಳಿದಿದ್ದು ಮಣ್ಣಿನಲ್ಲಿ ಹುಗಿದುಕೊಂಡು ಪಲ್ಟಿ ಹೊಡೆದಿದೆ. ಲಾರಿಯನ್ನು ಮೇಲೆತ್ತಲು ನಾಲ್ಕು ಕ್ರೇನ್ ಬಂದಿದ್ದು ಸುಮಾರು ನಾಲ್ಕು ತಾಸು ಕಾರ್ಯಾಚರಣೆ ನಡೆಸಲಾಯಿತು.
ಈ ವೇಳೆ ರಸ್ತೆ ಸಂಪರ್ಕ ಕಡಿತವಾಗಿದ್ದು ರಸ್ತೆಯ ಎರಡೂ ಬದಿಯಲ್ಲಿಯೂ ಎರಡು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಜೆಯ ವೇಳೆಗೆ ಲಾರಿಯನ್ನು ಎತ್ತಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.