Latest NewsLocalUncategorized

ಭಾರೀ ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಮರ: ಬೀದಿಗೆ ಬಂದ ಕುಟುಂಬ

ಭಾರೀ ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಮರ: ಬೀದಿಗೆ ಬಂದ ಕುಟುಂಬ

 

ಶಿರಸಿ: ತಾಲೂಕಿನ ಹಲಗದ್ದೆ ಪಂಚಾಯತಿ ವ್ಯಾಪ್ತಿಯ ಮಾಡನಗೇರಿ ಗ್ರಾಮದಲ್ಲಿ ಕೃಷ್ಣ ತೇಜ ಮಾಡಿವಾಳ ಇವರ ಮನೆಯ ಮೇಲೆ ಬೃಹತ್ ಗಾತ್ರದ ಮರಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ ನೆಲಸಮವಾದ ಘಟನೆ ನಡೆದಿದೆ.

ಮನೆಯಲ್ಲಿದ್ದವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಬೇಕೆಂದು ಬನವಾಸಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಂಜುನಾಥ ನಾಯ್ಕ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!