Uncategorized
ಬಿಣಗಾದ ಕಂಪನಿಯಲ್ಲಿ ಬಾಯ್ಲರ್ ಲೀಕೇಜ್ ; ಓರ್ವ ಸಾವು.
ಬಿಣಗಾದ ಕಂಪನಿಯಲ್ಲಿ ಬಾಯ್ಲರ್ ಲೀಕೇಜ್ ; ಓರ್ವ ಸಾವು.
ಕಾರವಾರ: ತಾಲ್ಲೂಕಿನ ಬಿಣಗಾದ ಗ್ರಾಸಿಮ್ ಇಂಡಸ್ಟ್ರೀಸ್‌ನಲ್ಲಿ ಬಾಯ್ಲರ್‌ನಲ್ಲಿ ಲೀಕೇಜ್ ಆದ ಪರಿಣಾಮ ಕಾರ್ಮಿಕನೋರ್ವ ಸಾವನ್ನಪ್ಪಿದ್ದಾನೆ. ಬೈತಖೋಲ ಮೂಲದ ನಾಗರಾಜ ವಿಷ್ಣು ಅವರ್ಸೇಕರ್(41) ಮೃತ ದುರ್ದೈವಿಯಾಗಿದ್ದಾನೆ.
ಇಲ್ಲಿನ ಸೋಲಾರಿಸ್ ಕೆಮಿಟೆಕ್ ಕಂಪೆನಿಯಲ್ಲಿ ರಾತ್ರಿ ಪಾಳಿಯಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ರಾತ್ರಿ 11:30ರ ಸುಮಾರಿಗೆ ಬಾಯ್ಲರ್‌ನಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿದ್ದು, ಬೈತಖೋಲದ ಕಾರ್ಮಿಕ ನಾಗರಾಜ ಸಾವನ್ನಪ್ಪಿದ್ದಾನೆ. ಉಳಿದ ಕಾರ್ಮಿಕರು ಅಲ್ಲಿಂದ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕಾರ್ಮಿಕನ ಮೃತದೇಹವನ್ನು ಕಾರವಾರದ ಕ್ರಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಕಾರವಾರ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.