Crime
ಕಾರು ಹಾಗೂ ಬುಲೆರೋ ನಡುವೆ ಮುಖಾಮುಖಿ ಡಿಕ್ಕಿ: ಯುವ ಬ್ಯಾಂಕ್ ಉದ್ಯೋಗಿ ಸಾವು
ಕಾರು ಹಾಗೂ ಬುಲೆರೋ ನಡುವೆ ಮುಖಾಮುಖಿ ಡಿಕ್ಕಿ: ಯುವ ಬ್ಯಾಂಕ್ ಉದ್ಯೋಗಿ ಸಾವು

ಯಲ್ಲಾಪುರ: ತಾಲೂಕಿನ ತೆಂಗನಗೇರಿ ಬಳಿ ಕಾರು ಹಾಗೂ ಬುಲೆರೋ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಮಡಕಿ ಹೊನ್ನಳ್ಳಿ ಮೂಲದ ಇಂಡಿಯನ್ ಒವರ್ಸೀಸ್ ಬ್ಯಾಂಕ್ ಕಲಘಟಗಿ ಶಾಖೆಯ ಉದ್ಯೋಗಿ ದವಲ್ ಹೊರಾ(23) ಮೃತ ದುರ್ದೈವಿಯಾಗಿದ್ದಾನೆ.
ದವಲ್ ಹೊರಾ ಅವರು ಬ್ಯಾಂಕ್ ಸಹೋದ್ಯೋಗಿಗಳೊಂದಿಗೆ ಯಲ್ಲಾಪುರಕ್ಕೆ ಬಂದಿದ್ದರು. ಹಿಂದಿರುಗಿ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದಾಗ, ಬ್ಯಾಂಕ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಕಾರಿಗೆ ಯಲ್ಲಾಪುರದಿಂದ ಬರುತ್ತಿದ್ದ ಬುಲೆರೋ ವಾಹನ ಡಿಕ್ಕಿ ಹೊಡೆದಿದೆ. ಬುಲೆರೋದಲ್ಲಿ ಸಿಂಟೆಕ್ಸ್, ಕಬ್ಬಿಣದ ಶೀಟ್ ಹಾಗೂ ಕಬ್ಬಿಣದ ಪೈಪುಗಳನ್ನು ಸಾಗಿಸುತ್ತಿದ್ದು, ಅಪಘಾತದ ರಭಸಕ್ಕೆ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿದ್ದವು. ದುರದೃಷ್ಟವಶಾತ್, ಒಂದು ಕಬ್ಬಿಣದ ಪೈಪ್ ದವಲ್ ಹೊರಾ ಅವರ ಎದೆಗೆ ಚುಚ್ಚಿ, ಅವರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಂಭವಿಸಿದ ಅಪಘಾತದ ವಿವರಗಳನ್ನು ಕಲೆಹಾಕುತ್ತಿದ್ದು ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.