ಅಣ್ಣ ತನ್ನ ಸ್ವಂತ ತಂಗಿಯನ್ನೇ ಮದುವೆಯಾಗಿರುವ ಘಟನೆ ವರದಿಯಾಗಿದೆ.
ಸಹೋದರ, ಸಹೋದರಿಯ ಸಂಬಂಧ ಪವಿತ್ರವಾದದ್ದು. ಈ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಶ್ರೇಷ್ಠ ಸಂಬಂಧಗಳಲ್ಲಿ ಅಣ್ಣ-ತಂಗಿ ಸಂಬಂಧವೂ ಒಂದು. ಆದರೆ ಇಲ್ಲೊಬ್ಬ ಅಣ್ಣ ಇಡೀ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾನೆ. ಕೇವಲ 35 ಸಾವಿರ ರೂಪಾಯಿ ಗೋಸ್ಕರ ತನ್ನ ತಂಗಿಯನ್ನೆ ಮದುವೆಯಾಗಿದ್ದಾನೆ. ಇದು ದೇಶಾದ್ಯಂತ ಸಂಚಲನ ಮೂಡಿಸುಲು ಕಾರಣವಾಗಿದೆ.
ಉತ್ತರ ಪ್ರದೇಶದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಅಣ್ಣನೊಬ್ಬ ತನ್ನ ತಂಗಿಯನ್ನೇ ಮದುವೆಯಾಗಿದ್ದಾನೆ. ಕೇವಲ 35 ಸಾವಿರ ರೂಪಾಯಿಗೊಸ್ಕರ ಇಬ್ಬರು ಮದುವೆಯಾಗಿದ್ದಾರೆ.
ಅಣ್ಣ-ತಂಗಿ ಇಬ್ಬರು ಹಣಕ್ಕಾಗಿ ಮದುವೆಯಾಗಿರುವ ವಿಚಾರವನ್ನು ತಿಳಿದು ಸ್ಥಳೀಯರು ನೀಡಿದ ದೂರಿನ ಮೇರೆಗೆ ಜಿಲ್ಲಾಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ವಿವಾಹದ ಹಿಂದೆ ಸ್ಥಳೀಯ ಪುರಸಭೆ ನೌಕರನ ಕೈವಾಡ ಇರುವುದು ಕಂಡು ಬಂದಿದೆ. ಇಬ್ಬರಿಗೂ ನಕಲಿ ವಿವಾಹ ಪ್ರಮಾಣ ಪತ್ರ ನೀಡಿರುವುದು ತಿಳಿದುಬಂದಿದೆ. ಈ ಘಟನೆ ಕುರಿತು ಜಿಲ್ಲಾಧಿಕಾರಿ ವೇದ್ ಸಿಂಗ್ ಚೌಹಾಣ್ ತನಿಖೆ ನಡೆಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕುಟುಂಬದವರು ಮದುವೆಯಾದರೆ ಅವರಿಗೆ ಹಣಕಾಸಿನ ನೆರವು ನೀಡುತ್ತದೆ. ಮುಖ್ಯಮಂತ್ರಿ ಸಾಮೋಹಿಕ್ ವಿವಾಹ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ. ವಿವಾಹಿತ ಯುವತಿಗೆ ಮದುವೆ ವೆಚ್ಚವಾಗಿ ಸರ್ಕಾರ 35 ಸಾವಿರ ರೂ. ನಗದು, 10 ಸಾವಿರ ರೂ. ಮೌಲ್ಯದ ಅಗತ್ಯ ವಸ್ತುಗಳು ಹಾಗೂ ಹೆಚ್ಚುವರಿಯಾಗಿ 6 ಸಾವಿರ ರೂ. ನೀಡುತ್ತಿದೆ. ಈ ನೆರವನ್ನು ಪಡೆಯಲು ಅಣ್ಣ-ತಂಗಿ ಇಬ್ಬರು ಮದುವೆಯಾಗಿರುವುದಾಗಿ ನಕಲಿ ವಿವಾಹ ಪ್ರಮಾಣ ಪತ್ರ ನೀಡಿ ಸವಲತ್ತು ಪಡೆದುಕೊಂಡಿದ್ದಾರೆ. ಆದರೆ ವಿಚಾರಣೆ ವೇಳೆ ಸಿಕ್ಕಿಬಿದ್ದಿದ್ದಾರೆ.
ಸರಕಾರದ ಸವಲತ್ತು ಪಡೆಯಲು ಅನೇಕರು ನಕಲಿ ಮದುವೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಇದನ್ನು ಪತ್ತೆಹಚ್ಚುವ ಕೆಲಸ ಸರಕಾರ ಆರಂಭಿಸಿದೆ.