ಗೋಕರ್ಣ: ಹೆಜ್ಜೇನು ದಾಳಿಯಿಂದ ನಾಲ್ವರು ಪ್ರವಾಸಿಗರು ಅಸ್ವಸ್ಥಗೊಂಡ ಘಟನೆ ಸೋಮವಾರ ಸಂಜೆ ರಾಮತೀರ್ಥದ ಬಳಿ ನಡೆದಿದೆ.
ದೇಹಲಿಯ ಮೂವರು ಹಾಗೂ ಒರ್ವ ವಿದೇಶಗ ಸೇರಿ ರಾಮ ಮಂದಿರದ ಪಕ್ಕದ ಪರ್ವತದ ಬಳಿ ಚಾರಣಕ್ಕೆ ತೆರಳಿದ ವೇಳೆ ಹೆಚ್ಚೇನು ಕಡಿದಿದ್ದು, ಜೊತೆಗಿದ್ದ ಉತ್ತರ ಭಾರತದ ಪ್ರವಾಸಿಗರ ನೆರವಿನಿಂದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಪ್ರಭಾರಿ ವೈದ್ಯಾಧಿಕಾರಿಯಾದ ಅಂಕೋಲಾ ತಾಲೂಕಾ ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ಚಿಕಿತ್ಸೆ ನೀಡಿದ್ದಾರೆ. ಕೂಡಲೇ ಚಿಕಿತ್ಸೆ ನೀಡಿದ್ದರಿಂದ ಪ್ರವಾಸಿಗರು ಜೀವಾಪಾಯದಿಂದ ಪಾರಾಗಿದ್ದಾರೆ. ಜೇನು ಕಡಿದು ಫ್ರಾನ್ಸ್ ಮೂಲದ ಅಲೆಕ್ಸಿಸ್ ಜರ‍್ರಿ (36) ಚಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಜೇನು ಕಡಿದಿರುವುದರಿಂದ ವಿಪರೀತ ವಾಂತಿ ಆರಂಭಗೊಂಡು ಅಸ್ವಸ್ಥಗೊಂಡಿದ್ದರು. ಜೀನಿನ ಹುಳ ಪೇಟೆಯವರೆಗು ಬಂದು ಆತಂಕ ಸೃಷ್ಟಿಸಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಎದರುರಾಗಿಲ್ಲ. ಜೇನು ಹುಳ ಕಡಿದು ಗಾಯಗೊಂಡ ದೆಹಲಿ ಮೂಲದವರು ವೃತಿಯಲ್ಲಿ ಉಪನ್ಯಾಸಕರು ಎಂದು ತಿಳಿದು ಬಂದಿದ್ದು, ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರೆನ್ನಲಾಗಿದೆ.