ಹೊನ್ನಾವರದಲ್ಲಿ ರಾಷ್ಟ್ರ ಮಟ್ಟದ ಅಂಧರ ಜೂನಿಯರ್ ಚೆಸ್ ಚಾಂಪಿಯನ್ಶಿಪ್
ಹೊನ್ನಾವರದಲ್ಲಿ ರಾಷ್ಟ್ರ ಮಟ್ಟದ ಅಂಧರ ಜೂನಿಯರ್ ಚೆಸ್ ಚಾಂಪಿಯನ್ಶಿಪ್
ಹೊನ್ನಾವರದಲ್ಲಿ ರಾಷ್ಟ್ರ ಮಟ್ಟದ ಅಂಧರ ಜೂನಿಯರ್ ಚೆಸ್ ಚಾಂಪಿಯನ್ಶಿಪ
ಕಾರವಾರ: ಹೊನ್ನಾವರ ರೋಟರಿ ಕ್ಲಬ್ ಆಶ್ರಯದಲ್ಲಿ ನವೆಂಬರ್ 19, 20 ಮತ್ತು 21 ರಂದು ದೃಷ್ಟಿದೋಷವುಳ್ಳ ಜೂನಿಯರ್ ರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ರೋ ಸೂರ್ಯಕಾಂತ್ ಸಾರಂಗ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು. ಸಂಪೂರ್ಣ ಮತ್ತು ಅರೆದೃಷ್ಟಿವುಳ್ಳ ಕ್ರೀಡಾಪಟುಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಲ್ ಇಂಡಿಯನ್ ಚೆಸ್ ಫೆಡರೇಶನ್ ಫಾರ್ ದಿ ಬ್ರೆಂಡ್ ಮತ್ತು ಕರ್ನಾಟಕ ಸ್ಟೇಟ್ ಚೆಸ್ ಅಸೋಷಿಯೇಷನ್ ಫಾರ್ ವಿಷುವಲಿ ಚಾಲೆಂಜ್ ಟೂರ್ನಿಗೆ ಸಹಭಾಗಿತ್ವ ನೀಡಲಿದ್ದಾರೆ. ಹೊನ್ನಾವರದ ಕಾಸರಕೋಡಿನ ಮಯೂರಿ ECO beach resort ನಲ್ಲಿ ಟೂರ್ನಿ ಆಯೋಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಇದುವರೆಗೆ ದೃಷ್ಟಿವುಳ್ಳ ಜೂನಿಯರ್ ಚೆಸ್ ಚಾಂಪಿಯನ್ ಶಿಪ್ ಒಂದು ಬಾರಿ ನಡೆದಿದ್ದು ಈಗ ಎರಡನೇ ಬಾರಿ ಈ ಚಾಂಪಿಯನ್‌ಶಿಪ್ ನಡೆಯುತ್ತಿರುವುದು ಅದು ಕೂಡ ಹೊನ್ನಾವರದಲ್ಲಿ ನಡೆಯುತ್ತಿದೆ ಎನ್ನುವುದು ಹೆಮ್ಮೆಯ ವಿಷಯ. ಇದೊಂದು ಸವಾಲಿನ ಕೆಲಸವಾದರೂ ಆಯೋಜನೆಗೆ ರಾಷ್ಟ್ರೀಯ ಚೆಸ್ ಅಸೋಸಿಯೇಷನ್ ಅವಕಾಶ ನೀಡಿದೆ ಎಂದರು.
ಕಾರ್ಯಕ್ರಮದ ಇವೆಂಟ್ ಚೇರ್ಮನ್ ರೋ ಶ್ರೀಕಾಂತ್ ನಾಯ್ಕ, ಮಾತನಾಡಿ ಈ ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಚಾಂಪಿಯನ್ ಆದವರು ಸೇರಿದಂತೆ ಒಟ್ಟೂ ನಾಲ್ಕು ಮಂದಿ ಆಟಗಾರರು ಯೂರೋಪ್ ದೇಶದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ ಎಂದರು.
ಟೂರ್ನಿಯಲ್ಲಿ ಪಾಲ್ಗೊಳ್ಳಲು ಬರುವ ಸ್ಪರ್ಧಾರ್ಥಿಗಳೊಂದಿಗೆ ಅವರ ಸಹಾಯಕರು ಆಗಮಿಸಲಿದ್ದಾರೆ. ಅವರಿಗೆ ಉಳಿದುಕೊಳ್ಳಲು ಮಯೂರಿ ಈಕೋ ಬೀಚ್ ರೆಸಾರ್ಟ್ ನಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಹೊರ ರಾಜ್ಯಗಳಿಂದ ಬರುವ ಸ್ಪರ್ಧಿಗಳು ರೈಲ್ವೆ ಮೂಲಕ ಆಗಮಿಸುತ್ತಿದ್ದು, ಹೊನ್ನಾವರ ಮತ್ತು ಮುರುಡೇಶ್ವರ ರೈಲು ನಿಲ್ದಾಣಗಳಿಂದ ಅವರನ್ನು ಕರೆತರಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಚೆಸ್ ಪಂದ್ಯಗಳನ್ನು ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು ಈಗಾಗಲೇ ಪಶ್ಚಿಮ ಬಂಗಾಲ, ಗುಜರಾತ್, ಮಹಾರಾಷ್ಟ್ರ, ಉತ್ತರಪುದೇಶ. ತಮಿಳುನಾಡು ಹಾಗು ನಮ್ಮ ರಾಜ್ಯದ ಒಟ್ಟು 60 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರ ಜೊತೆ ಅಷ್ಟೇ ಸಂಖ್ಯೆಯ ಸಹಾಯಕರು ಆಗಮಿಸಲಿದ್ದು ದೇಶದ ವಿವಿಧ ಭಾಗಗಳಿಂದ ಸುಮಾರು 100ಜನರು ಈ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ..
ರಾಷ್ಟ್ರ ಮಟ್ಟದ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಆಟಗಾರರು ಹಾಗೂ ಅವರ ಸಹಾಯಕ್ಕಾಗಿ ಬರುವ ಎಲ್ಲಾ ಸೇರಿ 100 ಜನರಿಗೆ ಉಚಿತವಾಗಿ ಅತ್ಯುತ್ತಮ ವಸತಿ ಸೌಕರ್ಯ. ಸಭಾಂಗಣದ ವ್ಯವಸ್ಥೆ. ಸಾರಿಗೆ ಹಾಗೂ ಊಟದ ವ್ಯವಸ್ಥೆಯನ್ನು ಹೊನ್ನಾವರ ರೋಟರಿ ಕ್ಲಬ್ ಮಾಡಲಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಂದ ಯಾವುದೇ ರೀತಿಯ ಶುಲ್ಕವನ್ನು ಪಡೆದುಕೊಳ್ಳದೇ ಈ ಪಂದ್ಯವನ್ನು ನಡೆಸಲಾಗುವುದು ಮತ್ತು ವಿಜೇತರಾದವರಿಗೆ ನಗದು ಬಹುಮಾನ ಮತ್ತು ಫಲಕಗಳನ್ನು ನೀಡಲಾಗುವುದು. ಜಿಲ್ಲೆಯ ಚಿಕ್ಕ ಪಟ್ಟಣದಲ್ಲಿ ದೃಷ್ಟಿದೋಷವುಳ್ಳವರಿಗಾಗಿ ನಡೆಯುವ ಕ್ರೀಡಾಕೂಟಕ್ಕೆ ಪ್ರಾಯೋಜಕತ್ವ ನೀಡಲು ಯಾರೂ ಮುಂದೆ ಬರುತ್ತಿಲ್ಲ. ಕ್ರೀಡಾಭಿಮಾನದಿಂದ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದೇವೆ.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ರೋ ರಾಘವೇಂದ್ರ ಪ್ರಭು. ರೋ ಎಸ್ ಎಂ ಭಟ್. ರೋ ಡಿ ಜೆ ನಾಯ್ಕ, ಹಾಗೂ ರೋಟರಿ ಕಾರ್ಯದರ್ಶಿ ರೋ ಎಂ ಎಂ ಹೆಗಡ ಉಪಸ್ಥಿತರಿದ್ದರು.