Uncategorized

ನಿಯಮ ಉಲ್ಲಂಘಿಸಿ ಸಂಚಾರ: ವಾಹನಗಳಿಗೆ ಪೊಲೀಸರಿಂದ ದಂಡ

ನಿಯಮ ಉಲ್ಲಂಘಿಸಿ ಸಂಚಾರ: ವಾಹನಗಳಿಗೆ ಪೊಲೀಸರಿಂದ ದಂಡ

ನಿಯಮ ಉಲ್ಲಂಘಿಸಿ ಸಂಚಾರ: ವಾಹನಗಳಿಗೆ ಪೊಲೀಸರಿಂದ ದಂಡ
ದಾಂಡೇಲಿ: ದಾಂಡೇಲಿ ನಗರ ಠಾಣೆಯ ಪಿಎಸ್‌ಐ ಕಿರಣ್ ಪಾಟೀಲ್ ಅವರ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆಯನ್ನು ನಡೆಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 30 ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬೆಳಗ್ಗೆಯಿಂದಲೇ ವಿವಿಧ ವಾಹನಗಳ ತಪಾಸಣೆಯನ್ನು ನಡೆಸಲಾಗಿತ್ತು. ಈ ತಪಾಸಣೆ ಕಾರ್ಯದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಒಟ್ಟು 30 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ದಂಡ ಆಕರಣೆ ಮಾಡಲಾಯಿತು.

ಸಮರ್ಪಕ ದಾಖಲೆ ಪತ್ರಗಳಿಲ್ಲದೆ, ವಾಹನ ಚಾಲನಾ ಪರವಾನಿಗೆ ಇಲ್ಲದೆ ಇರುವುದು, ಸೇರಿದಂತೆ ವಿವಿಧ ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ಮಾಡಿರುವುದನ್ನು ಗಮನಿಸಿ ಸೂಕ್ತ ದಂಡವನ್ನು ಆಕರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪಿಎಸ್‌ಐ ಕಿರಣ್ ಪಾಟೀಲ್ ಅವರು ಸಂಚಾರಿ ನಿಯಮಗಳ ಪಾಲನೆಯ ಕುರಿತಂತೆ ಮನವರಿಕೆ ಮಾಡಿ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆಯನ್ನು ನೀಡಿದರು.

ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಪೊಲೀಸರು ಭಾಗವಹಿಸಿದ್ದರು. ಪಿಎಸ್‌ಐ ಕಿರಣ್ ಪಾಟೀಲ್ ಮತ್ತು ಪೊಲೀಸರ ಈ ಕಾರ್ಯಕ್ಕೆ ನಗರದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!