Uncategorized

ಮಾಜಿ ಎಂಎಲ್‌ಸಿ ಶುಭಲತಾ ಅಸ್ನೋಟಿಕರ್ ನಿಧನಕ್ಕೆ ಸುವರ್ಣಸೌಧದ ಅಧಿವೇಶನದಲ್ಲಿ ಸಂತಾಪ

ಮಾಜಿ ಎಂಎಲ್‌ಸಿ ಶುಭಲತಾ ಅಸ್ನೋಟಿಕರ್ ನಿಧನಕ್ಕೆ ಸುವರ್ಣಸೌಧದ ಅಧಿವೇಶನದಲ್ಲಿ ಸಂತಾಪ

ಮಾಜಿ ಎಂಎಲ್‌ಸಿ ಶುಭಲತಾ ಅಸ್ನೋಟಿಕರ್ ನಿಧನಕ್ಕೆ ಸುವರ್ಣಸೌಧದ ಅಧಿವೇಶನದಲ್ಲಿ ಸಂತಾಪ
ಕಾರವಾರ: ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಶುಭಲತಾ ವಸಂತ್ ಅಸ್ನೋಟಿಕರ್ ಅವರ ನಿಧನಕ್ಕೆ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದಲ್ಲಿ ಸಂತಾಪ ಸೂಚಿಸಲಾಯಿತು.

ವಿಧಾನ ಪರಿಷತ್ತಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆಯ ನಿರ್ಣಯದ ಪ್ರತಿಯನ್ನು ಸಭೆಗೆ ಮಂಡಿಸಿದರು.

ಸಭಾ ನಾಯಕರಾದ ಸಚಿವ ಬೋಸರಾಜು ಮತ್ತು ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಅವರು ಅಗಲಿದ ಶುಭಲತಾ ವಸಂತ್ ಅಸ್ಫೋಟಕರ್ ಅವರ ಸೇವೆಯನ್ನು ಸ್ಮರಿಸಿ, ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ರಾಜಕಾರಣಿ ಸೇವಕಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.

ಮೃತರ ಗೌರವಾರ್ಥ ಇಡೀ ಸದನ ಒಂದು ನಿಮಿಷ ಮೌನಾಚಾರಣೆ ಮಾಡಿ ನಮನ ಸಲ್ಲಿಸಲಾಯಿತು.

1957ರ ಜನವರಿ 06ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಜನಿಸಿದ್ದ ಶ್ರೀಯುತರು ಬಿಎ ಪದವೀಧರರಾಗಿದ್ದು, ವೃತ್ತಿಯಲ್ಲಿ ವ್ಯಾಪಾರ ಮತ್ತು ಸಮಾಜ ಸೇವಕರಾಗಿದ್ದರು. 2004 ರಿಂದ 2010ರ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗಿ ಸೇವೆಯನ್ನು ಸಲ್ಲಿಸಿದ್ದರು. ಶ್ರೀಯುತರು ಪೋರ್ಟ್ ಅಂಡ್ ಡಾಕ್ ಲೇಬರ್ ಕೋ-ಆಪರೇಟಿವ್ ಸೊಸೈಟಿ, ಕಾರವಾರ, ನವೋದಯ ಪ್ರೌಢಶಾಲೆ, ಕಿನ್ನರ, ಕಾರವಾರ ಇದರ ಅಧ್ಯಕ್ಷರಾಗಿ, ಕಾರವಾರ ತಾಲ್ಲೂಕು ಕೂಲಿ ಕಾರ್ಮಿಕರ ಸಂಘದ ಖಜಾಂಚಿ ಹಾಗೂ ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!