Crime
ಲಂಚ ಪಡೆಯುತ್ತಿದ್ದ ಕಾರವಾರ ಜಿಲ್ಲಾ ಸರ್ಜನ್ ಲೋಕಾಯುಕ್ತ ಬಲೆಗೆ
ಲಂಚ ಪಡೆಯುತ್ತಿದ್ದ ಕಾರವಾರ ಜಿಲ್ಲಾ ಸರ್ಜನ್ ಲೋಕಾಯುಕ್ತ ಬಲೆಗೆ

ಕಾರವಾರ: ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್ ಮೇಲೆ ಲೋಕಾಯುಕ್ತರ ತಂಡ ದಾಳಿ ನಡೆಸಿದೆ. ರೋಗಿಗಳ ಹಾಸಿಗೆ ಪೂರೈಕೆಗೆ ಸಂಬಂಧಿಸಿದ ಟೆಂಡರ್‌ನಲ್ಲಿ ಕಮಿಷನ್ ಪಡೆಯುವಾಗ ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಂದಿದ್ದಾರೆ.
ಡಾ. ಕುಡ್ತಲಕರ್ ಅಂಕೋಲಾ ಮೂಲದ ಗುತ್ತಿಗೆದಾರ ಮೌಸೀನ್ ಅಹ್ಮದ್ ಶೇಕ್‌ನಿಂದ 75,000 ರೂಪಾಯಿ ಕಮಿಷನ್ ಬೇಡಿದ್ದರು. ನಿನ್ನೆ ರಾತ್ರಿ 20,000 ರೂಪಾಯಿ ಪಡೆದಿದ್ದ ಅವರು, ಇಂದು ಉಳಿದ 30,000 ರೂಪಾಯಿ ತೆಗೆದುಕೊಳ್ಳುವ ಸಮಯದಲ್ಲಿ ಲೋಕಾಯುಕ್ತರ ತಂಡದ ಕೈಗೆ ಸಿಕ್ಕಿಬಿದ್ದರು.
ಕಾರವಾರ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯ್ಕ್ ನೇತೃತ್ವದ ಪೊಲೀಸ್ ತಂಡ ಈ ಕ್ರಮ ಕೈಗೊಂಡಿದೆ. ಪ್ರಸ್ತುತ ಲೋಕಾಯುಕ್ತ ಸಿಬ್ಬಂದಿ ದಾಖಲೆ ಪರಿಶೀಲನೆ ನಡೆಸುತ್ತಿದೆ.