ರೂಮ್ ಮಾಡ್ತೀನಿ ಬಾ’ ಅಂದ ಕುಡುಕನ ಚಳಿ ಬಿಡಿಸಿದ ಮಹಿಳೆ!
ರೂಮ್ ಮಾಡ್ತೀನಿ ಬಾ' ಅಂದ ಕುಡುಕನ ಚಳಿ ಬಿಡಿಸಿದ ಮಹಿಳೆ!

ಶಿರಸಿ: ಬಸ್‌ಗಾಗಿ ಕಾಯುತ್ತಾ ಕುಳಿತಿದ್ದ ಮಹಿಳೆಗೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ‘ರೂಮ್ ಮಾಡ್ತೀನಿ ಬಾ’ ಎಂದು ಅಸಭ್ಯವಾಗಿ ವರ್ತಿಸಿದ ಹಿನ್ನಲೆ ಮಹಿಳೆ ಚಪ್ಪಲಿಯೇಟು ನೀಡಿದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದಿದೆ. ಕುಡುಕನಿಗೆ ಮಹಿಳೆ ಬುದ್ದಿ ಕಲಿಸಿದ್ದು, ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದ್ಯಪಾನದ ಅಮಲಿನಲ್ಲಿ ತೇಲುತ್ತಿದ್ದ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಾ ಕೂತಿದ್ದ ಮಹಿಳೆಯ ಬಳಿ ಬಂದು, “ರೂಮ್ ಮಾಡ್ತೀನಿ ಬಾ” ಎಂಬ ಅಶ್ಲೀಲವಾಗಿ ಮಾತನಾಡಿದ್ದ. ಇದರಿಂದ ಆಕ್ರೋಶಗೊಂಡ ಮಹಿಳೆ, ತಕ್ಷಣವೇ ತನ್ನ ಚಪ್ಪಲಿಯನ್ನು ಹಿಡಿದು ಆ ವ್ಯಕ್ತಿಗೆ ಕೆನ್ನೆಗೆ ಬಾರಿಸಿದ್ದಾಳೆ. ಈ ಘಟನೆಯ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜನರು ಆಕೆಯ ಧೈರ್ಯವನ್ನು ಪ್ರಶಂಸಿಸುತ್ತಿದ್ದಾರೆ.
ಕೆನ್ನೆಗೆ ಭಾರಿಸುತ್ತಿದ್ದಂತೆ ವ್ಯಕ್ತಿಯ ನಶೆ ಕೂಡ ತಕ್ಷಣವೇ ಇಳಿದಂತಾಯಿತು. “ಒಬ್ಬಂಟಿ ಮಹಿಳೆ ಕಂಡರೆ ಇನ್ಮೇಲೆ ಕೆಣಕಲು ಧೈರ್ಯ ಮಾಡಬಾರದು” ಎಂದು ಹೇಳುತ್ತಾ ಆಕೆ ತನ್ನ ಕೋಪವನ್ನು ಹೊರ ಹಾಕಿದಳು. ಸ್ಥಳದಲ್ಲಿದ್ದ ಪ್ರಯಾಣಿಕರೂ ಮಹಿಳೆಯೊಂದಿಗೆ ಬೆಂಬಲವಾಗಿ ನಿಂತು, ಕುಡುಕನ ವಿರುದ್ಧ ಕಿಡಿಕಾರಿದರು.
ಸ್ಥಳೀಯರು ಹೇಳುವಂತೆ, ಈ ವ್ಯಕ್ತಿ ಪ್ರತಿದಿನ ಇದೇ ರೀತಿಯ ವರ್ತನೆಗಳಲ್ಲಿ ತೊಡಗಿಕೊಂಡಿದ್ದ. ಅನೇಕ ಬಾರಿ ಮಹಿಳೆಯರನ್ನು ಕೆಣಕಿದ ಈ ಕಿರಾತಕ, ಇದುವರೆಗೆ ಯಾವುದೇ ವಿರೋಧ ವ್ಯಕ್ತವಾಗದ ಕಾರಣ ತನ್ನ ಕುಕೃತ್ಯ ಮುಂದುವರೆಸಿದ್ದ. ಆದರೆ ಈ ಬಾರಿ, ಮಹಿಳೆಯೊಬ್ಬಳು ಧೈರ್ಯದಿಂದ ಮುಂದೆ ಬಂದು ಆತನ ದುರ್ವರ್ತನೆಗೆ ಸರಿಯಾದ ಬುದ್ದಿ ಕಲಿಸಿದ್ದಾಳೆ.