ಕಾರವಾರ: ಗೋಕರ್ಣದ ಕುಡ್ಲೇ ಕಡಲತೀರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ ಮಾಡಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದ ಕುಡ್ಲೇ ಬೀಚ್ನಲ್ಲಿ ಈಜಲು ತೆರಳಿದ ಉತ್ತರ ಪ್ರದೇಶ ಬನಾರಸ್ ಮೂಲದ ರಾಹುಲ್ ಕುಮಾರ್(28) ಸಮುದ್ರದ ಅಲೆಗೆ ಸಿಲುಕಿ ಮುಳಗಲಾರಂಭಿಸಿದ್ದ, ಇದನ್ನು ಕಂಡ ಲೈಫ್ಗಾರ್ಡ್ ಸಿಬ್ಬಂದಿ ಮಂಜುನಾಥ ಹರಿಕಂತ್ರ ಮತ್ತು ಪ್ರದೀಪ ಅಂಬಿಗ ಇವರು ಗೋಕರ್ಣ ಅಡ್ವೆಂಚರ್ಸ್ನ ಜೆಟ್ಸ್ಕೀ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ.
ಬನಾರಸನಿಂದ ಗೋಕರ್ಣಕ್ಕೆ ಬಂದಿದ್ದ ರಾಹುಲ್ ರಾಮಕಥಾ ಕೇಳಲು ಕುಡ್ಲೇ ಕಡಲತೀರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಕುಡ್ಲೇ ಬೀಚ್ನಲ್ಲಿ ಈಜಲು ತೆರಳಿದ್ದರು. ಈ ಕುರಿತು
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.