Uncategorized

ಪದ್ಮಶ್ರೀ ತುಳಸಿ ಗೌಡರ ಕುರಿತ ‘ದಿ ಫಾರೆಸ್ಟ್ ಡಿಕ್ಷನರಿ’ ಚಲನಚಿತ್ರ ಶೀಘ್ರದಲ್ಲಿ ತೆರೆಗೆ

ಪದ್ಮಶ್ರೀ ತುಳಸಿ ಗೌಡರ ಕುರಿತ 'ದಿ ಫಾರೆಸ್ಟ್ ಡಿಕ್ಷನರಿ' ಚಲನಚಿತ್ರ ಶೀಘ್ರದಲ್ಲಿ ತೆರೆಗೆ

ಪದ್ಮಶ್ರೀ ತುಳಸಿ ಗೌಡರ ಕುರಿತ ‘ದಿ ಫಾರೆಸ್ಟ್ ಡಿಕ್ಷನರಿ’ ಚಲನಚಿತ್ರ ಶೀಘ್ರದಲ್ಲಿ ತೆರೆಗೆ

ಅಂಕೋಲಾ: ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಅಂಕೋಲಾ ರವರು ಪಂಚ ಭೂತಗಳಲ್ಲಿ ಲೀನರಾಗಿದ್ದಾರೆ. ಅವರ ಸಾಧನೆ ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕು ಎಂಬ ಉದ್ದೇಶದಿಂದ ಖ್ಯಾತ ಚಲನಚಿತ್ರ ನಿರ್ಮಾಪಕ ನಿರ್ದೇಶಕ ವಿಶ್ವನಾಥ ರವರು ದಿ ಫಾರೆಸ್ಟ್ ಡಿಕ್ಷನರಿ ಎಂಬ ಕನ್ನಡ ಚಲನಚಿತ್ರವನ್ನು ಅದ್ದೂರಿ ತಾರಾಗಣದೊಂದಿಗೆ ನಿರ್ಮಿಸಲಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಚಿತ್ರ ತಂಡವು ಅಂಕೋಲಾ ಹೊನ್ನಳ್ಳಿಯಲ್ಲಿರುವ ತುಳಸಿ ಗೌಡರವರ ಮನೆಗೆ ಆಗಮಿಸಿ ಅವರೊಂದಿಗೆ ಮಾತನಾಡಿ ಅವರ ಕುರಿತಾಗಿ ಚಲನಚಿತ್ರ ನಿರ್ಮಿಸುವುದಾಗಿ ತಿಳಿಸಿ ಅವರ ಆಶೀರ್ವಾದವನ್ನು ಪಡೆದು ತೆರಳಿತ್ತು. ಅಂತೆಯೇ ಚಿತ್ರೀಕರಣದ ಸಂಪೂರ್ಣ ಸಿದ್ಧತೆಯಲ್ಲಿ ಚಿತ್ರ ತಂಡವು ತೊಡಗಿಕೊಂಡಿದೆ. ಅಷ್ಟರಲ್ಲಿಯೇ ತುಳಸಿ ಗೌಡರವರು ವಿಧಿವಶರಾದ ಸುದ್ದಿ ತಿಳಿದ ತಕ್ಷಣ ಚಿತ್ರ ನಿರ್ದೇಶಕ ವಿಶ್ವನಾಥರವರು ತಮ್ಮ ಚಿತ್ರ ನಿರ್ಮಾಣದ ಸಹಾಯಕರೊಂದಿಗೆ ಅಂಕೋಲಾಕ್ಕೆ ಆಗಮಿಸಿ ತುಳಸಿ ಗೌಡರವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಉಪಸ್ಥಿತರಿದ್ದು ಮೃತರಿಗೆ ತಮ್ಮ ಗೌರವವನ್ನು ಸಲ್ಲಿಸಿದರು.

ಸಂಜೆ ಕನ್ನಡ ಸಾಹಿತ್ಯ ಪರಿಷತ್ ಅಂಕೋಲಾ ಘಟಕದಿಂದ ಹಮ್ಮಿಕೊಂಡ ತುಳಸಿಗೌಡ ರವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ತಾವು ತುಳಸಿ ಗೌಡರ ಕುರಿತು ಚಲನಚಿತ್ರ ನಿರ್ಮಾಣ ಮಾಡುವುದಾಗಿ ತಿಳಿಸಿದರು. ವಿಶ್ವನಾಥ ರವರು ಡಾ. ರಾಜಕುಮಾರ್ ಅವರ ಅನೇಕ ಚಲನಚಿತ್ರಗಳಲ್ಲಿ ಸಹನಿರ್ದೇಶಕರಾಗಿದ್ದು ರಾಘವೇಂದ್ರ ರಾಜಕುಮಾರ್ ಅವರ ಶಿವರಂಜಿನಿ ಚಿತ್ರವನ್ನು ನಿರ್ದೇಶನ ಕೂಡ ಮಾಡಿದವರಾಗಿದ್ದಾರೆ.

ಈ ಬಹು ನಿರೀಕ್ಷಿತ ಚಲನಚಿತ್ರವು ಜನೆವರಿ ಅಥವಾ ಫೆಬ್ರುವರಿಯಲ್ಲಿ ಸೆಟ್ಟೇರುವುದಾಗಿ ತಿಳಿಸಿದ್ದಾರೆ. ಅವರೊಂದಿಗೆ ಚಿತ್ರ ತಂಡದ ರಾಜು ನಾಯಕ ಅಂಕೋಲಾದ ಗಾಯಕ ಹಾಗೂ ಛಾಯಾಗ್ರಾಹಕ ಪ್ರಶಾಂತ ಶೆಟ್ಟಿ, ಪಿ ಎಮ್ ಜೂನಿಯರ್ ಕಾಲೇಜ್ ಪ್ರಾಚಾರ್ಯ ಪಾಲ್ಗುಣ ಗೌಡ ಹಾಗೂ ಹಲವರು ಉಪಸ್ಥಿತರಿದ್ದು ಸಹಕರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!