Education
ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಬಾಲಮಂದಿರ ಶಾಲೆಯ ಆದಿತ್ಯ ನಾಯ್ಕ ರಾಜ್ಯಕ್ಕೇ ಪ್ರಥಮ
ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಬಾಲಮಂದಿರ ಶಾಲೆಯ ಆದಿತ್ಯ ನಾಯ್ಕ ರಾಜ್ಯಕ್ಕೇ ಪ್ರಥಮ

ಕಾರವಾರ: ಕಾರವಾರ ಶಿಕ್ಷಣ ಸಂಸ್ಥೆಯ ಬಾಲಮಂದಿರ ಹೈಸ್ಕೂಲ್‌ನ ವಿದ್ಯಾರ್ಥಿ ಆದಿತ್ಯ ಅಜಿತ ನಾಯ್ಕ 2024-25ನೇ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ರಲ್ಲಿಗೆ 625 ಅಂಕಗಳನ್ನು ಪಡೆದು(100%) ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಗಮನಸೆಳೆದಿದ್ದಾರೆ.
ಆದಿತ್ಯ ಅವರು ರಾಜ್ಯಕ್ಕೇ ಪ್ರಥಮ ಸ್ಥಾನ, ಉತ್ತರ ಕನ್ನಡ ಜಿಲ್ಲೆ ಹಾಗೂ ಕಾರವಾರ ತಾಲೂಕಿಗೂ ಕೂಡ ಪ್ರಥಮ ಸ್ಥಾನ ಪಡೆದಿದ್ದು ಕುಟುಂಬಸ್ಥರು ಹಾಗೂ ಸಂಬಂಧಿಕರು ಈತನ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆದಿತ್ಯ ಅಜಿತ ನಾಯಕ ಸಾಧನೆ ಶಾಲೆಗೆ ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು, ವಿದ್ಯಾರ್ಥಿಯ ಭವಿಷ್ಯ ಇನ್ನಷ್ಟು ಬೆಳಗಲಿ ಎಂದು ಬಾಲಮಂದಿರ ಶಾಲೆಯ ನಿರ್ವಹಣಾ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಯನ್ನು ಅಭಿನಂದಿಸಿ ಶುಭಹಾರೈಸಿದ್ದಾರೆ.