*ಡಿಪೋದಲ್ಲಿ ನಿಂತಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ: ಸಂಪೂರ್ಣ ಸುಟ್ಟು ಕರಕಲು!*
ಕುಮಟಾ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ನಿಲ್ಲಿಸಿಡಲಾಗಿದ್ದ Ksrtc ಬಸ್ ಒಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಬಸ್ ಧಗಧಗನೆ ಹೊತ್ತಿ ಉರಿದಿರುವ ಘಟನೆ ರವಿವಾರ ತಡರಾತ್ರಿ 2 ಗಂಟೆಗೆ ನಡೆದಿದೆ.
ರವಿವಾರ ಸಂಜೆ ರೂಟ್ ಮುಗಿಸಿ ಬಂದಿದ್ದ ಬಸ್‌ನ್ನು ಡಿಪೋದಲ್ಲಿ ನಿಲ್ಲಿಸಲಾಗಿತ್ತು. ಈ ಬಸ್ ಸೋಮವಾರ ಬೆಳಿಗ್ಗೆ ಇನ್ನೊಂದು ರೂಟ್‌ಗೆ ಹೊರಡುವುದಿತ್ತು. ಸಂಜೆ ಕರ್ತವ್ಯ ಮುಗಿಸಿದ ಚಾಲಕ ಎಂದಿನಂತೆ ಡಿಪೋದಲ್ಲಿ ಬಸ್ ಇಟ್ಟು ಹೋಗಿದ್ದರು. ಆದರೆ ರಾತ್ರಿ ವೇಳೆ ನಿಲ್ಲಿಸಟ್ಟ ಸ್ಥಳದಲ್ಲಿಯೇ ಬಸ್‌ಗೆ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಕುಮಟಾದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿದ್ದು, ಸದ್ಯ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬಸ್‌ಗೆ ಚಲಿಸುವಾಗ ಈ ರೀತಿ ಬೆಂಕಿ ಕಾಣಿಸಿಕೊಂಡಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು.
ಈ ಬಗ್ಗೆ ಕುಮಟಾ ಪೊಲೀಸರು ವಿಚಾರಣೆ ಕೈಗೊಂಡಿದ್ದು, ತನಿಖೆ ಬಳಿಕವಷ್ಟೇ ಬಸ್‌ಗೆ ಬೆಂಕಿ ತಗುಲಿದ ಬಗ್ಗೆ ನಿಖರ ಮಾಹಿತಿ ತಿಳಿದು ಬರಲಿದೆ.