ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದ ಪ್ರವಾಸಿಗರಿಬ್ಬರು ಪರಲೋಕಕ್ಕೆ ಪ್ರಯಾಣ!
ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದ ಪ್ರವಾಸಿಗರಿಬ್ಬರು ಪರಲೋಕಕ್ಕೆ ಪ್ರಯಾಣ!
ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದ ಪ್ರವಾಸಿಗರಿಬ್ಬರು ಪರಲೋಕಕ್ಕೆ ಪ್ರಯಾಣ!
ಕುಮಟಾ: ಬೆಂಗಳೂರಿನಿಂದ ಬಂದ ಪ್ರವಾಸಿಗರಿಬ್ಬರು ಗೋಕರ್ಣದಲ್ಲಿ ಸಮುದ್ರ ಪಾಲಾಗಿದ್ದಾರೆ. ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.
ಗುರುವಾರ ಬೆಂಗಳೂರಿನಿಂದ 15 ಮಂದಿ ಸ್ನೇಹಿತರು ಗೋಕರ್ಣಕ್ಕೆ ಬಂದಿದ್ದರು. ಗೋಕರ್ಣದ ಮುಖ್ಯ ಕಡಲತೀರದ ಪಕ್ಕದ ಮಿಡ್ಲ್ ಬೀಚ್ನಲ್ಲಿ ಅವರೆಲ್ಲರೂ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಅಪಾಯದ ಮುನ್ಸೂಚನೆ ಅರಿಯದೇ ಬೆಂಗಳೂರಿನ ರವಿ(30) ಹಾಗೂ ವಿಜಯನಗರದ ಪ್ರತೀಕ(33) ಸಮುದ್ರದಲ್ಲಿ ಈಜುತ್ತಾ ತೆರಳಿದ್ದರು.
ಇತರರು ಅವರನ್ನು ಹಿಂಬಾಲಿಸಿದ್ದು, ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರೂ ಕೊಚ್ಚಿ ಹೋಗಿದ್ದಾರೆ. ಅಲ್ಲಿದ್ದ ರಕ್ಷಣಾ ಸಿಬ್ಬಂದಿ ಇತರರನ್ನು ಸಮುದ್ರ ದಡಕ್ಕೆ ಕರೆ ತಂದರು. ಆದರೆ, ರವಿ ಹಾಗೂ ಪ್ರತೀಕ ಅಪಾಯದ ಸುಳಿಗೆ ಸಿಲುಕಿದ್ದು, ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಅವರಿಬ್ಬರನ್ನೂ ದಡಕ್ಕೆ ತಂದ ನಂತರವೂ ಬದುಕಬಹುದು ಎಂಬ ಹಿನ್ನಲೆ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಸಾಕಷ್ಟು ಪ್ರಮಾಣದಲ್ಲಿ ಉಪ್ಪು ನೀರು ಕುಡಿದಿದ್ದ ಆ ಇಬ್ಬರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.