Uncategorized

ಮನೆ ಮಂದಿ ನಿದ್ದೆಯಲ್ಲಿದ್ದಾಗಲೇ ಕನ್ನ ಹಾಕಿ ದೇವರನ್ನೇ ಕದ್ದೊಯ್ದ ಕಳ್ಳರು

ಮನೆ ಮಂದಿ ನಿದ್ದೆಯಲ್ಲಿದ್ದಾಗಲೇ ಕನ್ನ ಹಾಕಿ ದೇವರನ್ನೇ ಕದ್ದೊಯ್ದ ಕಳ್ಳರು

ಮನೆ ಮಂದಿ ನಿದ್ದೆಯಲ್ಲಿದ್ದಾಗಲೇ ಕನ್ನ ಹಾಕಿ ದೇವರನ್ನೇ ಕದ್ದೊಯ್ದ ಕಳ್ಳರು

ಅಂಕೋಲಾ: ಮನೆಯಲ್ಲಿ ಜನರು ಮಲಗಿರುವಾಗಲೇ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ ಬೆಲೆಬಾಳುವ ದೇವರ ಮೂರ್ತಿಗಳನ್ನು ಕದ್ದೊಯ್ದ ಘಟನೆ ತಾಲೂಕಿನ ಹಿಲ್ಲೂರು ತಿಂಗಳಬೈಲಿನಲ್ಲಿ ನಡೆದಿದೆ. ವೃತ್ತಿಯಲ್ಲಿ ಪಿಡಿಓ ಆಗಿರುವ ವಿಠ್ಠಲ ವಾಸು ಬಾಂದಿ ಇವರು ಈ ಕುರಿತು ದೂರು ನೀಡಿದ್ದಾರೆ.

ದೂರಿನಲ್ಲಿರುವಂತೆ ಡಿಸೆಂಬರ್ 8ರ ಮದ್ಯರಾತ್ರಿಯಿಂದ ನಸುಕಿನ 2.30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಜನರು ಮನೆಯಲ್ಲಿ ಮಲಗಿರುವಾಗ, ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶಿಸಿ, ದೇವರ ಕೋಣೆಯ ಬೀಗ ಮುರಿದು, ದೇವರ ಕೋಣೆಯಲ್ಲಿದ್ದ ಅಂದಾಜು 1 ಲಕ್ಷ 30 ಸಾವಿರ ರೂ. ಬೆಲೆಬಾಳುವ ಹಿತ್ತಾಳೆ ಲೋಹದ ದೇವರ 47 ಮೂರ್ತಿಗಳು, 5 ಕಪಿಲ್ ಕಲ್ಲುಗುಂಡುಗಳು ಹಾಗೂ ವಿಠಲ ಬಾಂದಿ ಅವರ ಹೆಂಡತಿಯ ಹಳೆಯ ನೊಕಿಯಾ ಮೊಬೈಲನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!