ಸಿಐಎಸ್ ಎಫ್ ಸೈಕ್ಲೋಥಾನ್ ಗೆ ರೂಪಾಲಿ ಎಸ್.ನಾಯ್ಕ ಅವರಿಂದ ಸ್ವಾಗತ
ಸಿಐಎಸ್ ಎಫ್ ಸೈಕ್ಲೋಥಾನ್ ಗೆ ರೂಪಾಲಿ ಎಸ್.ನಾಯ್ಕ ಅವರಿಂದ ಸ್ವಾಗತ

ಅಂಕೋಲಾ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಸೈಕ್ಲೋಥಾನ್ 2025ರ ಜಾಥಾವನ್ನು ಅಂಕೋಲಾ ತಾಲೂಕಿನ ಆವರ್ಸಾದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಸ್ವಾಗತಿಸಿದರು.
ಆವರ್ಸಾಕ್ಕೆ ಆಗಮಿಸಿದ ಸೈಕ್ಲೋಥಾನ್ ಜಾಥಾ ತಂಡಕ್ಕೆ ಹೂವಿನ ಗುಚ್ಚ ನೀಡಿ ಸ್ವಾಗತಿಸಿದರು. ಬಳಿಕ ಸಿಐಎಸ್ಎಫ್ ಯೋಧರಿಗೆ ಹೂವಿನ ಹಾರ ಹಾಕಿ, ಆರತಿ ಎತ್ತುವ ಮೂಲಕ ಜಾಥಾ ಸುಗಮವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ನಿಂದ ಸಮುದ್ರತೀರ ಸೈಕ್ಲೋಥಾನ್, ‘ಸುರಕ್ಷಿತ ತಟ, ಸಮೃದ್ದ ಭಾರತ (ಸುರಕ್ಷಿತ ಕರಾವಳಿ, ಸಮೃದ್ದ ಭಾರತ) ಎಂಬ ಧ್ಯೇಯ ವಾಕ್ಯದೊಂದಿಗೆ ಗುಜರಾತ್‌ನಿಂದ ಕನ್ಯಾಕುಮಾರಿವರೆಗೆ 24 ಜನ ಯೋಧರು ಸೈಕ್ಲೋಥಾನ್ ಜಾಥಾ ನಡೆಸುತ್ತಿದ್ದಾರೆ. ಭಾರತದ 6,553 ಕಿಮೀ ಉದ್ದದ ಕರಾವಳಿ ಭದ್ರತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದಾರೆ.
ಈ ಸೈಕ್ಲೋಥಾನ್- 2025ರ ಭಾಗವಾಗಿ ಯೋಧರು ಮಾರ್ಗದುದ್ದಕ್ಕೂ ಮೀನುಗಾರರು ಮತ್ತು ಸ್ಥಳೀಯ ಸಮುದಾಯದೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಮಾಜ ವಿರೋಧಿ ಶಕ್ತಿಗಳ ಒಳನುಸುಳುವಿಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕರಾವಳಿ ಭದ್ರತೆಯನ್ನು ಖಚಿತಪಡಿಸುವಲ್ಲಿ ಸಿಐಎಸ್ ಎಫ್ ಪಾತ್ರವನ್ನು ಎತ್ತಿ ತೋರಿಸುತ್ತಿದ್ದಾರೆ.
ಬಿಜೆಪಿ ಪ್ರಮುಖರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.