
ಕಾರವಾರ: ಅರಣ್ಯ ಇಲಾಖೆಯು ಜುಲೈ 28 ರಿಂದ ಆಗಸ್ಟ್ 1 ರ ವರೆಗೆ 2025 ರಂದು ದಾಂಡೇಲಿ ಟಿಂಬರ್ ಡಿಪೋದಲ್ಲಿ ಮರದ ದಿಮ್ಮೆಗಳ ಹರಾಜನ್ನು ನಡೆಸಲಿದ್ದು, ಈ ಹರಾಜು ಮರದ ವ್ಯಾಪಾರಿಗಳು, ಪೀಠೋಪಕರಣ ತಯಾರಕರು ಮತ್ತು ಇತರ ಮಧ್ಯಸ್ಥಗಾರರು ಪ್ರೀಮಿಯಂ, ಉತ್ತಮ ಗುಣಮಟ್ಟದ, ತೇಗ, ಸಿಸ್ಸಮ್, ಮತ್ತಿ, ನಂದಿ, ಹೊನ್ನೆ, ಕರಿಮುತ್ತಲ್, ಜಂಬೆ ಅಕೇಶಿಯಾ ಮತ್ತು ಇತರೆ ಮರಗಳ ದಿಮ್ಮೆಗಳನ್ನು ಇ-ಹರಾಜು ಮತ್ತು ಟೆಂಡರ್ ಪ್ರಕ್ರಿಯೆಯ ಮೂಲಕ ಖರೀದಿಸಬಹುದಾಗಿದೆ/ ಅಮೂಲ್ಯವಾದ ಅವಕಾಶವನ್ನು ಒದಗಿಸುತ್ತದೆ.
ಇ-ಹರಾಜು-ಕಮ್-ಟೆಂಡರ್ ಮೂಲಕ ಒಟ್ಟು 3000 ಮರದ ತುಂಡುಗಳು, 4,500 ಘನ ಮೀಟರ್‌ಗಳು ಇದ್ದು, ತೇಗ, ಸಿಸ್ಸಮ್, ಮತ್ತಿ, ನಂದಿ, ಹೊನ್ನೆ, ಕರಿಮುತ್ತಲ್, ಜಂಬೆ, ಕಿಂದಾಲ್, ಕಲಾಂ, ಹೆದ್ದಿ, ಅಕೇಶಿಯಾ ಮತ್ತು ಇತರ ಗಟ್ಟಿಮರದ ದಿಮ್ಮೆಗಳನ್ನು ಒಳಗೊಂಡಿದೆ.
ಎಲ್ಲಾ ಭಾಗವಹಿಸುವವರಿಗೆ ನ್ಯಾಯಯುತ ಮತ್ತು ಸ್ಪರ್ಧಾತ್ಮಕ ಬೆಲೆಯಿದ್ದು, ಆಸಕ್ತ ಬಿಡ್ದಾರರು ಹರಾಜು ದಿನಾಂಕಗಳ ಮೊದಲು ಎಂಎಸ್ಟಿಸಿ ಇ-ಹರಾಜು ಪೋರ್ಟಲ್‌ನಲ್ಲಿ ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ದಾಂಡೇಲಿ ಡಿಪೋ ಅಧಿಕಾರಿ – +91 8861724343 ಮತ್ತು +91 97730 78388 MSTC ಇ-ಹರಾಜು ಪೋರ್ಟಲ್ https://www.mstcecommerce.com/auctionhome/kafd/index.jsp, MSTC ಇ-ಹರಾಜು email – ಇಮೇಲ್: mstcblr@mstcindia.co.in, ಕರ್ನಾಟಕ ಅರಣ್ಯ ಇಲಾಖೆ ಇ-ಟಿಂಬರ್ ಪೋರ್ಟಲ್ lot wise ಮಾಹಿತಿ ಪಡೆಯಲು http://etimber.aranya.gov.in/etimber/BidderLotRoleReport.aspx, etimberkfd@gmail.com ನ್ನು ಸಂಪರ್ಕಿಸಬಹುದಾಗಿದೆ.