ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ: ನಿವೃತ್ತ ಯೋಧರಿಗೆ ಸನ್ಮಾನ
ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ: ನಿವೃತ್ತ ಯೋಧರಿಗೆ ಸನ್ಮಾನ

ಕಾರವಾರ: ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಹಾಗೂ ನಗರ ಮಂಡಲ ಕಾರವಾರ ವತಿಯಿಂದ ಶನಿವಾರ ಕಾರ್ಗಿಲ್ ವಿಜಯ ದಿವಸವನ್ನು ಕಾರವಾರ ಬಿಜೆಪಿ ಕಾರ್ಯಾಲಯದಲ್ಲಿ ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ ಆಚರಿಸಲಾಯಿತು.
ಆರಂಭದಲ್ಲಿ ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ ಗೀತೆ ಹಾಡಿ ಚಾಲನೆ ನೀಡಿದರು, ರಾಜ್ಯ ಪ್ರಕೋಸ್ಟ್ ದ ಸದಸ್ಯರು ಸುನಿಲ್ ಸೋನಿ ಯವರು ಯೋಧರು ನಮ್ಮ ದೇಶದ ಬೆನ್ನೆಲುಬು ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷರು ಮಾಲಾ ಹುಲಸ್ವಾರ ರವರು ಇಂದು ಪ್ರಧಾನಿ ನರೇಂದ್ರ ಮೋದಿಜೀಯವರ ಆಡಳಿತದಲ್ಲಿ ಸೈನಿಕರಿಗೆ ಅಪಾರ ಗೌರವ ನೀಡುತ್ತಿರುವುದು ಹೆಮ್ಮೆಯ ವಿಷಯ. ಹಾಗೆ ವೀರ ಯೋಧರು ಇರುವುದರಿಂದ ನಾವು ಯಾವ ಭಯವಿಲ್ಲದೆ ಇದ್ದೇವೆ. ಅಂತಹ ಯೋಧರನ್ನು ಇವತ್ತು ನಾವು ಗೌರವಿಸುವದು ನಮ್ಮ ಧರ್ಮ ಎಂದರು.
ಅಶೋಕ್ ರಾಣೆ ಮಾತನಾಡಿ ಭಾರತೀಯರಾದ ನಾವೆಲ್ಲರೂ ದೇಶಕ್ಕೋಸ್ಕರ ದುಡಿಯಬೇಕು, ಹಾಗೆ ದುಡಿದ ಸೈನಿಕರನ್ನು ಗೌರವಿಸಬೇಕು ಎಂದರು.
ಮಂಡಲ ಉಪಾಧ್ಯಕ್ಷ ಚಂದನ್ ಸಾವಂತ್ ಮಾತನಾಡಿ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಗಡಿ ಕಾಯುವ ಸೈನಿಕರ ಕಷ್ಟ, ದೇಶ ಕ್ಕೋಸ್ಕರ ಅವರು ನೀಡಿದ ಬಲಿದಾನ, ಕಾರ್ಯಾಚರಣೆ ಸಂಧರ್ಭದಲ್ಲಿ ಸೈನಿಕರ ಮೇಲೆ ನಡೆದ ದೌರ್ಜನ್ಯ ದ ಬಗ್ಗೆ ವಿವರವಾಗಿ ತಿಳಿಸಿದರು.
ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರ್ಡೇಕರ್ ಮಾತನಾಡಿ ಲಡಾಕ್ ಯುದ್ಧದಲ್ಲಿ ತ್ಯಾಗ ಮಾಡಿದ ಸೈನಿಕರನ್ನು ಇಂದಿನ ದಿನದಲ್ಲಿ ನಾವು ನೆನೆಸಿಕೊಳ್ಳುವುದು ನಮ್ಮ ಕರ್ತವ್ಯ, ಅಂದಿನ ಪ್ರಧಾನಿ ವಾಜಪೇಯಿ ಯವರು ಸೈನಿಕರ ಬಗ್ಗೆ ಅಪಾರ ಗೌರವ ನೀಡುತ್ತಿದ್ದರು ಎಂದರು.
ಕೊನೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಗೌರವ ಸಮರ್ಪಣೆ ನೀಡಲಾಯಿತು. ಚೆಂಡಿಯಾದ ಚಂದ್ರಕಾಂತ್ ಕೊಠಾರಕರ್, ಚಂದ್ರಕಾಂತ್ ರಾಣೆ, ಮೋಹನ್ ಸಾಲುಂಕೆ, ರಾಜೇಶ್ ಸಾಲುಂಕೆ ಸನ್ಮಾನಿಸಿದರು.
ವೇದಿಕೆಯಯಲ್ಲಿ ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ, ಜಿಲ್ಲಾ ಉಪಾಧ್ಯಕ್ಷರು ಸಂಜಯ್ ಸಾಳುಂಕೆ ಉಪಸ್ಥಿತರಿದ್ದರು. ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ್ ಸ್ವಾಗತಿಸಿದರು, ನಗರ ಕಾರ್ಯದರ್ಶಿ ಅಶೋಕ ಗೌಡ ವಂದಿಸಿದರು, ನಗರ ಸಭೆ ಸದಸ್ಯರು, ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಹಾಗೂ ತಂಡ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.