Uncategorized
ಪಡಿತರ ಅಕ್ಕಿ ಅಕ್ರಮ ಸಾಗಾಟ ಯತ್ನ: 40 ಕ್ವಿಂಟಲ್ ಅಕ್ಕಿಯೊಂದಿಗೆ ಮೂವರ ಬಂಧನ
ಪಡಿತರ ಅಕ್ಕಿ ಅಕ್ರಮ ಸಾಗಾಟ ಯತ್ನ: 40 ಕ್ವಿಂಟಲ್ ಅಕ್ಕಿಯೊಂದಿಗೆ ಮೂವರ ಬಂಧನ

ಶಿರಸಿ: ಬಡ ಪಡಿತರದಾರರಿಗೆ ಸರಕಾರದಿಂದ ನೀಡಲಾಗುವ ಅಕ್ಕಿ ಶಿರಸಿಯಲ್ಲಿ ದುರ್ಬಳಕೆ ಆಗುತ್ತಿದೆ ಎನ್ನುವ ದೂರು ಸಾರ್ವಜನಿಕರಿಂದ ಬಲವಾಗಿ ಕೇಳಿ ಬರುತ್ತಿತ್ತು. ಅದೀಗ ಪೋಲಿಸರ ಕಾರ್ಯಚರಣೆಯಿಂದ ನಿಜವಾಗಿದೆ.
ಶಿರಸಿಯಲ್ಲಿ ಪೋಲಿಸರು ನಡೆಸಿದ ಮಹತ್ವದ ಕಾರ್ಯಚರಣೆಯೊಂದರಲ್ಲಿ ಶಿರಸಿಯಿಂದ ಹುಬ್ಬಳ್ಳಿಗೆ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾದ ಸುಮಾರು ಒಂದು ಲಕ್ಷ ರೂ ಮೌಲ್ಯದ ಸುಮಾರು 40 ಕ್ಷಿಂಟಲ್ ಪಡಿತರ ಅಕ್ಕಿಯನ್ನು ಮೂವರು ಆರೋಪಿ ಸಮೇತವಾಗಿ ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಶಿರಸಿ ತಾಲೂಕಿನ ಇಸಳೂರಿನ ಸುನೀಲ್, ನರೆಬೈಲ್ ನ ಮಹಮ್ಮದ್ ಹಾಗೂ ಕಸ್ತೂರಬಾ ನಗರದ ಅಲ್ತಾಪ್ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ. ಈ ಬಗ್ಗೆ ಆಹಾರ ನಿರೀಕ್ಷಕರಾದ ಕವಿತಾ ಎಸ್ ಪಾಟಣಕರ್ ಪರಿಶೀಲಿನೆ ನಡೆಸಿದ ಬಳಿಕ ಪೋಲಿಸರಿಗೆ ದೂರು ನೀಡಿದ್ದಾರೆನ್ನಲಾಗಿದೆ.
ಇನ್ನೂ ಹೆಚ್ಚಿನ ಮಾಹಿತಿ ಪೋಲಿಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.