ಇಸ್ಪಿಟ್ ದಾಳಿ: 19 ಮಂದಿಗೆ ಬಂಧನ, ಲಕ್ಷಾಂತರ ನಗದು ವಶಕ್ಕೆ
ಇಸ್ಪಿಟ್ ದಾಳಿ: 19 ಮಂದಿಗೆ ಬಂಧನ, ಲಕ್ಷಾಂತರ ನಗದು ವಶಕ್ಕೆ

ಶಿರಸಿ ತಾಲೂಕಿನ ಭೈರುಂಭೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗಸಾಲ ಗ್ರಾಮದ “ವ್ಹಿ ಆರ್ ಆರ್ ಹೋಮ್‌ಸ್ಟೆ”ಯಲ್ಲಿ ಇಸ್ಪಿಟ್ ಅಡ್ಡೆಯ ಮೇಲೆ ಶಿರಸಿ ಗ್ರಾಮೀಣ ಪೋಲಿಸರಿಂದ ಭರ್ಜರಿ ದಾಳಿ ನಡೆಯಿತು. ಈ ದಾಳಿಯಲ್ಲಿ 19 ಮಂದಿಯನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು ₹49.50 ಲಕ್ಷ ನಗದು, 7 ಕಾರುಗಳು ಮತ್ತು 20 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ವಶಕ್ಕೆ ಪಡೆಯಲಾಗಿದೆ.
ಬಂಧಿತರು ಹಾವೇರಿ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೋಲಿಸರು ನಡೆಸಿದ ದಾಳಿ ಶಿರಸಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಡೆದ ಅತೀ ದೊಡ್ಡ ಇಸ್ಪಿಟ್ ದಾಳಿ ಎನ್ನಲಾಗುತ್ತಿದೆ.
ಈ ಕಾರ್ಯಚರಣೆ ಡಿವೈಎಸ್‌ಪಿ ಗೀತಾ ಪಾಟಿಲ್ ಅವರ ಮಾರ್ಗದರ್ಶನದಲ್ಲಿ ಹಾಗೂ ಪಿಎಸ್ಐ ಅಶೋಕ್ ರಾಠೋಡ್ ಅವರ ನೇತೃತ್ವದಲ್ಲಿ ನಡೆಯಿತು. ದಾಳಿಯಲ್ಲಿ ಎಎಸ್‌ಐ ಪ್ರದೀಪ ರೇವಣಕರ್, ಸಂತೋಷ ಕಟಮಗೇರಿ, ಸಿಬ್ಬಂದಿಗಳಾದ ರಾಘವೇಂದ್ರ ಜಿ, ಗಣಪತಿ ಪಟಗಾರ, ಷಣ್ಮುಖ ಮಿರಾಶಿ, ರವಿ ಉಕ್ಕಡಗಾತ್ರಿ, ಭರತಕುಮಾರ, ಭಾರತಿ ಗೌಡಾ ಸೇರಿದಂತೆ ಮುಂಡಗೋಡ ಪೋಲಿಸ್ ಠಾಣೆಯ ಕೋಟ್ರೆಶ ನಾಗರವಳ್ಳಿ ಹಾಗೂ ಅಣ್ಣಪ್ಪ ಬುಡಗೇರಿ ಅವರುಗಳು ಭಾಗವಹಿಸಿದ್ದರು.
ಈ ಯಶಸ್ವೀ ದಾಳಿಯನ್ನು ಮೆಚ್ಚಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರು ಗ್ರಾಮೀಣ ಪೊಲೀಸ್ ತಂಡವನ್ನು ಪ್ರಶಂಸಿಸಿದ್ದಾರೆ.