Uncategorized
ಅಂತರ್ಜಾತಿ ವಿವಾಹ: ಮಗಳು-ಅಳಿಯನಿಗೆ ಚಾಕು ಹಾಕಿ ಆತ್ಮಹತ್ಯೆ ಯತ್ನಿಸಿದ ಮಾವ
ಅಂತರ್ಜಾತಿ ವಿವಾಹ: ಮಗಳು-ಅಳಿಯನಿಗೆ ಚಾಕು ಹಾಕಿ ಆತ್ಮಹತ್ಯೆ ಯತ್ನಿಸಿದ ಮಾವ

ಶಿರಸಿ: ಶಿವರಾತ್ರಿ ದಿನವೇ ಮಾವ ತನ್ನ ಮಗಳಿಗೆ ಹಾಗೂ ಅಳಿಯನಿಗೆ ಚಾಕು ಇರಿದ ಘಟನೆ ಶಿರಸಿ ತಾಲೂಕಿನ ಬದನಗೋಡ ಪಂಚಾಯಿತಿ ವ್ಯಾಪ್ತಿಯ ರಂಗಾಪುರದಲ್ಲಿ ನಡೆದಿದೆ.
ಮಾವ ಶಂಕರ ಕಮ್ಮಾರ ಹಲ್ಲೆ ನಡೆಸಿದ ಆರೋಪಿಯಾದರೆ, ಅಳಿಯ ಮನೋಜ ಕಮಾಟಿ ಹಾಗೂ ಮಗಳು ಕವನ ಹಲ್ಲೆಗೊಳಗಾಗಿದ್ದಾರೆ.
ಅಂತರ್ಜಾತಿ ವಿವಾಹವೇ ಈ ಘಟನೆಗೆ ಕಾರಣವೆಂದು ತಿಳಿದು ಬಂದಿದ್ದು ಹಲ್ಲೆ ನಡೆಸಿದ ಮಾವ ತಾನೂ ಕೂಡಾ ಹಲ್ಲೆ ನಡೆಸಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಪಟ್ಟು ಅಳಿಯ ಮಗಳೊಂದಿಗೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಡಿವೈಎಸ್ಪಿ ಗಣೇಶ ಕೆ ಎಲ್ ಮಾರ್ಗದರ್ಶನದಲ್ಲಿ ಸಿಪಿಐ ಶಶಿಕಾಂತ ವರ್ಮಾ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.