Uncategorized
ಪ್ಯಾಂಟ್ ಒಳಗೆ ನಾಗರಹಾವು: ಸ್ವಲ್ಪದರಲ್ಲೇ ಬದುಕಿತು ಬಡ ಜೀವ!
ಪ್ಯಾಂಟ್ ಒಳಗೆ ನಾಗರಹಾವು: ಸ್ವಲ್ಪದರಲ್ಲೇ ಬದುಕಿತು ಬಡ ಜೀವ!

ಶಿರಸಿ: ಪ್ಯಾಂಟಿನೊಳಗೆ ಅವಿತಿದ್ದ ನಾಗರಹಾವು ಪ್ಯಾಂಟ್ ಹಾಕಿಕೊಳ್ಳುವಾಗ ಕಚ್ಚಲು ಬಂದು ಮೈ ಝುಂ ಎನ್ನಿಸುವ ಘಟನೆ ಶಿರಸಿಯ ನಾರಾಯಣಗುರು ನಗರದಲ್ಲಿ ನಡೆದಿದೆ.
ಇಲ್ಲಿನ ಮಾಂತೇಶ ಎನ್ನುವವರು ತಮ್ಮ ಪ್ಯಾಂಟನ್ನು ಗೋಡೆಯ ಮೊಳೆಗೆ ಸಿಕ್ಕಿಸಿದ್ದರು. ಆದರೆ ಆ ಪ್ಯಾಂಟಿನಲ್ಲಿ ನಾಗರ ಹಾವೊಂದು ಅವಿತು ಕುಳಿತಿದೆ. ಹಾವಿರುವುದರ ಅರಿವಿಲ್ಲದೇ ಅವರು ಪ್ಯಾಂಟ್ ತೆಗೆದು ಹಾಕಿಕೊಳ್ಳಲು ಮುಂದಾಗಿದ್ದಾರೆ. ಇನ್ನೇನು ಪ್ಯಾಂಟಿನೊಳಗೆ ಕಾಲು ಹಾಕುವಷ್ಟರಲ್ಲಿ ನಾಗರಾಜ ಪ್ಯಾಂಟಿನಿಂದ ಹೊರ ಬಂದು ಬುಸ್ ಎಂದಿದ್ದಾನೆ.
ಭಯಭೀತರಾದ ಮಾಂತೇಶ ಅವರು ಪ್ಯಾಂಟನ್ನು ಅಲ್ಲಿಯೇ ಬಿಟ್ಟು ಹಿಂದೆ ಸರಿದಿದ್ದಾರೆ. ಬಳಿಕ ಹುಲೇಕಲ್‌ನ ಸ್ನೇಕ್ ಪ್ರಶಾಂತ್ ಸ್ಥಳಕ್ಕಾಗಮಿಸಿ ಹಾವನ್ನು ರಕ್ಷಿಸಿದ್ದಾರೆ.