
ಶಿರಸಿ: ಗಾಂಜಾ ಮಾದಕ ವಸ್ತು ಸೇವಿಸಿದ ಬಗ್ಗೆ ವೈಧ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ನಗರ ಪೊಲೀಸರು
ಶಿರಸಿಯ ಗಣೇಶನಗರ ನಿವಾಸಿಯಾದ ಕಿರಣಕುಮಾರ ಸುಭಾಷ ಜೋಗಳೆಕರ್ ಮತ್ತು ಅರೆಕೊಪ್ಪದ ನಿವಾಸಿ ರಕ್ಷಿತ್ ರಾಮು ಬೆಳಗಾಂ ಬಂಧಿಸಿದ್ದಾರೆ.
ಇರ್ವರೂ ಶಿರಸಿ ನಗರದ ಜೂ ಸರ್ಕಲ್ ಹತ್ತಿರದ ಆನೆಹೊಂಡ ಕೆರೆ ದಡದಲ್ಲಿ ಗಾಂಜಾ ಅಮಲು ಪಧಾರ್ಥ ಸೇವನೆ ಮಾಡಿರುವ ಸಂಶಯದ ಮೇಲೆ ವಶಕ್ಕೆ ಪಡೆದು ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಎಸ್ಪಿ ನಾರಾಯಣ ಎಂ ಮಾರ್ಗದರ್ಶನ, ಡಿಎಸ್ಪಿ ಗಣೇಶ ಕೆ.ಎಲ್, ಸಿಪಿಐ ಶಶಿಕಾಂತ ವರ್ಮಾ ರವರ ನೇತ್ರದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಐ ನಾಗಪ್ಪ.ಬಿ ಸಿಬ್ಬಂದಿಗಳಾದ ಎಎಸ್ಐ ನಾರಾಯಣ ರಾಠೋಡ್, ಹನುಮಂತ ಕಬಾಡಿ, ಸತೀಶ್ ಅಂಬಿಗ, ಸದ್ದಾಂ ಹುಸೇನ್, ಮಲ್ಲಿಕಾರ್ಜುನ ಕುದರಿ, ಶಿವಲಿಂಗ ತುಪ್ಪದ, ರಾಜಶೇಖರ ಅಂಗಡಿ ಪಾಲ್ಗೊಂಡಿದ್ದರು.