Uncategorized
ರಾಜ್ಯ ಮಟ್ಟದ ಜೂಡೋ ಚಾಂಪಿಯನ್‌ಶಿಪ್‌ನಲ್ಲಿ ಸರಿತಾ ಕೇಸರೆಕರ್ ಗೆ ಪ್ರಥಮ ಸ್ಥಾನ
ರಾಜ್ಯ ಮಟ್ಟದ ಜೂಡೋ ಚಾಂಪಿಯನ್‌ಶಿಪ್‌ನಲ್ಲಿ ಸರಿತಾ ಕೇಸರೆಕರ್ ಗೆ ಪ್ರಥಮ ಸ್ಥಾನ

ಜೋಯಿಡಾ: 2025-26ನೇ ಸಾಲಿನ ಕರ್ನಾಟಕದ ಮೊದಲನೇ ಓಪನ್ ಸ್ಟೇಟ್ ಜೂಡೋ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಮಹಿಳಾ (ತೂಕ 60 ಕೆ.ಜಿ.) ವಿಭಾಗದಲ್ಲಿ ರಾಮನಗರ ದೇವುಲಿ ಗ್ರಾಮದ ಸರಿತಾ ತಾನಬಾ ಕೇಸರೆಕರ್ ಅವರು ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಈ ಪ್ರತಿಭಾವಂತ ಯುವತಿ ಹಲವು ವರ್ಷಗಳಿಂದ ಜೂಡೋ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದು, ಈ ಯಶಸ್ಸು ಅವರ ದೀರ್ಘವಾದ ಪರಿಶ್ರಮದ ಫಲವಾಗಿದೆ. ಸರಿತಾ ಅವರ ಈ ಸಾಧನೆಗೆ ಜೋಯಿಡಾ ತಾಲೂಕು ಹಾಗೂ ಜಿಲ್ಲೆಯ ಕ್ರೀಡಾಪಟುಗಳಿಂದ ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳು ಹರಿದುಬರುತ್ತಿವೆ.
ಈ ಸಾಧನೆಯ ಮೂಲಕ ಸರಿತಾ ಕೇಸರೆಕರ್ ಅವರು ಜಿಲ್ಲೆಯ ಇತರ ಯುವತಿಯರಿಗೆ ಪ್ರೇರಣೆಯಾಗಿದ್ದಾರೆ.