Uncategorized
ಪದ್ಮಶ್ರೀ ಪುರಸ್ಕೃತ, ವೃಕ್ಷಮಾತೆ ‘ತುಳಸಿ ಗೌಡ’ ಇನ್ನಿಲ್ಲ!
ಪದ್ಮಶ್ರೀ ಪುರಸ್ಕೃತ, ವೃಕ್ಷಮಾತೆ 'ತುಳಸಿ ಗೌಡ' ಇನ್ನಿಲ್ಲ!
ಪದ್ಮಶ್ರೀ ಪುರಸ್ಕೃತ, ವೃಕ್ಷಮಾತೆ ‘ತುಳಸಿ ಗೌಡ’ ಇನ್ನಿಲ್ಲ!
ಕಾರವಾರ: ಅನಾರೋಗ್ಯದಿಂದ ಬಳಲುತ್ತಿದ್ದ ವೃಕ್ಷಮಾತೆ, ಪದ್ಮಶ್ರಿ ಪುರಸ್ಕೃತೆ ತುಳಸಿ ಗೌಡ ಅವರು ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರಿಗೆ 87 ವರ್ಷ ವಯಸ್ಸಾಗಿದ್ದು, ಇವರು ಕಳೆದ ಅನೇಕ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಇವರು ತಮ್ಮ ಇಳಿ ವಯಸ್ಸಿನಲ್ಲಿಯೂ ಪರಿಸರ ಕಾಳಜಿ ಹೊಂದಿದ್ದರು. ಪರಿಸರ ಕಾಳಜಿಯೊಂದಿಗೆ ಸಾಲು ಸಾಲು ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸಿ ಬೆಳಸಿದ್ದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ನಿವಾಸಿಯಾಗಿದ್ದ ತುಳಸಿ ಗೌಡ, ಪರಿಸರ ಕಾಳಜಿ ಹಿನ್ನಲೆ 2020 ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಹ ಲಭಿಸಿತ್ತು. ತುಳಸಿ ಗೌಡ ನಿಧನಕ್ಕೆ ಶಾಸಕ ಸತೀಶ್ ಸೈಲ್, ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೇರಿ ಹಲವು ಗಣ್ಯರು, ಹಿರಿಯರು ಸಂತಾಪ ಸೂಚಿಸಿದ್ದಾರೆ.